ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲ ತಿಂಗಳುಗಳ ಹಿಂದೆ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆದಿತ್ತು. ಆಗ ದೈವಜ್ಞರು ಸೂಚಿಸಿದ ವಿವಿಧ ಪರಿಹಾರ ಕಾರ್ಯಕ್ರಮಗಳು ಆ.26ರ ಬೆಳಗ್ಗೆ ಗಂಟೆ 9 ರಿಂದ ದೇಗುಲದಲ್ಲಿ ನಡೆಯಲಿದೆ. ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಲಿರುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ದೈವಜ್ಞರ ನಿರ್ದೇಶನದಂತೆ ಸೀಮೆಯ ಎಲ್ಲಾ ಭಕ್ತಾದಿಗಳು, ವ್ಯವಸ್ಥಾಪನಾ ಸಮಿತಿ, ಅಧಿಕಾರಿ ವರ್ಗ, ಚಾಕರಿಯವರು ಸೇರಿಕೊಂಡು ಈ ಪರಿಹಾರ ಸೇವೆಗಳು ನಡೆಯಲಿದೆ. ಪರಿಹಾರ ಕಾರ್ಯಕ್ರಮದಲ್ಲಿ 12 ತೆಂಗಿನಕಾಯಿ ಗಣಪತಿ ಹವನ, ಶತರುದ್ರಾಭಿಷೇಕ, ಪವಮಾನ ಅಭಿಷೇಕ ಸಹಿತ ಪರಿವಾರ ದೇವರುಗಳಿಗೆ, ದೈವಗಳಿಗೆ ವಿಶೇಷ ಪೂಜೆ ನಡೆಯಲಿದೆ.ಇದರ ಜೊತೆಗೆ ವಿವಿಧ ಸಮರ್ಪಣೆಗಳು ನಡೆಯಲಿದೆ. ದೇವರಿಗೆ ಒಂದು ಚಿನ್ನದ ತ್ರಿನೇತ್ರ ಸಮರ್ಪಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಭಕ್ತರು ಚಿನ್ನದ ತುಂಡು, ಬೆಳ್ಳಿಯ ತುಂಡು, 5 ರೂಪಾಯಿ ಒಳಗಿನ ಚಲಾವಣೆಯಲ್ಲಿರುವ ನಾಣ್ಯಗಳ ಸಹಿತ ಅಭಿಷೇಕ್ಕೆ ಯೋಗ್ಯವಾದ ಬೆಳ್ಳಿಯ ಕಲಶದಲ್ಲಿ ಹಾಕಲು ಅವಕಾಶವಿದೆ ಎಂದರು.
ಒಂದು ಕೋಲು ಎತ್ತರದ ಬೆಳ್ಳಿಯ ತುಪ್ಪ ದೀಪವನ್ನು ದೇವರಿಗೆ ಸಮರ್ಪಿಸಿ ಪ್ರಾರ್ಥಿಸಲಾಗುವುದು. ಹನ್ನೊಂದು ರುದ್ರ ರನ್ನು ಸಂಕಲ್ಪಿಸಿ ಸಕಲೋಪಚಾರಗಳಿಂದ ಪೂಜಿಸಿ, ವೈದಿಕರಿಗೆ ವಸ್ತ್ರ ಉತ್ತರೀಯ ಊಟೋಪಚಾರ ಕೊಟ್ಟು ಯಥಾ ಶಕ್ತಿ ದ್ರವ್ಯ ಗಂಟು ಕಟ್ಟಿ ಸಮರ್ಪಿಸಿ ಆಶೀರ್ವಾದ ಪೂರ್ವಕ ಮಂತ್ರಾಕ್ಷತೆ, ಪ್ರತಿವಚನ ಪಡೆಯುವ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸದಸ್ಯರಾದ ಶೇಖರ್ ನಾರಾವಿ, ಐತಪ್ಪ ನಾಯ್ಕ್, ರಾಮದಾಸ್ ಗೌಡ, ರವೀಂದ್ರನಾಥ್ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಪ್ರಧಾನ ಅರ್ಚಕ ವಿ. ಯಸ್. ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…