ಜನ ಆರೋಗ್ಯಕ್ಕಾಗಿ ನಾವು ಎನ್ನುವ ಆಶಯದಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ರಚನೆಯಾಗಬೇಕು ಎಂದು ಒತ್ತಾಯಿಸಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ರಚಿಸಲಾಗಿದೆ. ವಿವಿಧ ಹಂತಗಳಲ್ಲಿ ಈ ಬಗ್ಗೆ ಹೋರಾಟ ನಡೆಸಲಿ ಸಭೆ ನಿರ್ಧರಿಸಿದೆ. ರಾಜಕೀಯ ಒತ್ತಡ, ಸರ್ಕಾರಕ್ಕೆ ಒತ್ತಡ ತರುವುದು ಹಾಗೂ ಮೆಡಿಕಲ್ ಕಾಲೇಜು ಪುತ್ತೂರಿಗೆ ಏಕೆ ಬೇಕಾಗಿದೆ ಎಂಬುದರ ಸ್ಪಷ್ಟ ಕಲ್ಪನೆಯನ್ನು ಜನರಿಗೆ ಮನದಟ್ಟು ಮಾಡಲು ಈ ಸಮಿತಿ ನಿರ್ಧರಿಸಿದೆ.
ಪುತ್ತೂರಿನಲ್ಲಿ ಈಚೆಗೆ ನಡೆದ ಎರಡನೇ ಸಭೆಯಲ್ಲಿ ಸುಮಾರು 40 ಕ್ಕೂ ಅಧಿಕ ಮಂದಿ ಭಾಗವಹಿಸಿದರು. ಸುಳ್ಯ, ಪುತ್ತೂರು ಹಾಗೂ ಆಸುಪಾಸಿನ ಪ್ರದೇಶಗಳಿಂದ ಮೆಡಿಕಲ್ ಕಾಲೇಜು ರಚನೆ ಬಗ್ಗೆ ಆಸಕ್ತರು ಆಗಮಿಸಿದ್ದರು. ವಿವಿಧ ರಾಜಕೀಯ,ಸಾಮಾಜಿಕ ಗುಂಪುಗಳಲ್ಲಿ ಸಕ್ರಿಯವಾಗಿರುವ ಜನರು ಸಭೆಯಲ್ಲಿ ಭಾಗವಹಿಸಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ರಚನೆ ಬಗ್ಗೆ ನಡೆದ ಸಭೆ. ಅಣ್ಣಾ ವಿನಯಚಂದ್ರ ಮಾತನಾಡಿದರು.#ಪುತ್ತೂರು #PutturMedicalCollege pic.twitter.com/l13zNncd3A
— theruralmirror (@ruralmirror) November 22, 2022
ಮೆಡಿಕಲ್ ಕಾಲೇಜು ಪುತ್ತೂರಿಗೆ ಏಕೆ ಅಗತ್ಯ ಇದೆ ಎಂಬುದರ ಬಗ್ಗೆ ಮಾಜಿ ಎಂಎಲ್‌ಸಿ ಅಣ್ಣಾ ವಿನಯಚಂದ್ರ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ನಾಗರಿಕ ಸಂಘಟನೆಗಳ ಭೇಟಿ. ಮನವಿ ಪತ್ರ ರಚನೆ, ಸೇರಿದಂತೆ ಆಂದೋಲನ ನಡೆಸಲು ನಿರ್ಧರಿಸಲಾಯಿತು.