ಅಡಿಕೆ ಆಮದು ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಶಾಸಕ ಅಶೋಕ್‌ ಕುಮಾರ್‌ ರೈ ಒತ್ತಾಯ |

December 30, 2023
3:44 PM
ಕೇಂದ್ರ ಸರ್ಕಾರ ತಕ್ಷಣವೇ ಆಮದು ನೀತಿಯನ್ನು ಬದಲು ಮಾಡಬೇಕು. ಆಮದು ಅಡಿಕೆಯನ್ನು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಒತ್ತಾಯಿಸಿದ್ದಾರೆ.

ಕರಾವಳಿ ಹಾಗೂ ಮಲೆನಾಡು ಭಾಗದ ಅದರಲ್ಲೂ ಪುತ್ತೂರಿನ ಪ್ರಮುಖ ವಾಣಿಜ್ಯ ಬೆಳೆ , ಆರ್ಥಿಕ ಬೆಳೆ ಅಡಿಕೆ. ಈಗ ಅಡಿಕೆ ಬೆಲೆ ಕುಸಿತವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಆಮದು ನೀತಿಯನ್ನು ಬದಲು ಮಾಡಬೇಕು. ಆಮದು ಅಡಿಕೆಯನ್ನು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಒತ್ತಾಯಿಸಿದ್ದಾರೆ.

Advertisement
Advertisement
Advertisement
ಅಶೋಕ್‌ ಕುಮಾರ್‌ ರೈ

ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌ ಕುಮಾರ್‌ ರೈ,ಅಡಿಕೆ ಧಾರಣೆ ಕಳೆದ ಕೆಲವು ದಿನಗಳಿಂದ ಕುಸಿತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಡಿಕೆ ಆಮದು ಎಂಬುದ ಅಡಿಕೆ ವಲಯದ ಮಾಹಿತಿ. ಹೀಗಾಗಿ ಕೇಂದ್ರ ಸರ್ಕಾರವು ಆಮದು ನೀತಿಯಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಇದೇ ರೀತಿ ಅಡಿಕೆ ಆಮದು ಆದರೆ ಅಡಿಕೆ ದರ 300 ರೂಪಾಯಿಗೆ ಕುಸಿತವಾಗುವ ಭೀತಿ ಇದೆ. ಹೀಗಾದರೆ ಕೃಷಿಕರಿಗೆ ಸಂಕಷ್ಟವಾಗಲಿದೆ. ಇದಕ್ಕಾಗಿ ತಕ್ಷಣವೇ ಕ್ರಮ ಆಗಬೇಕು ಎಂದು ಒತ್ತಾಯಿಸಿದ ಅಶೋಕ್‌ ಕುಮಾರ್‌ ರೈ, ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಆಮದು ನಿಲ್ಲಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ. ಇಲ್ಲದೇ ಇದ್ದರೆ ರೈತರೆಲ್ಲೂ ಸೇರಿ ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು, ಇಲ್ಲಿಯ ರೈತರು ಅಡಿಕೆಯನ್ನೇ ಅಲವಂಬಿಸಿದ್ದಾರೆ ಎಂದು ಅಶೋಕ್‌ ಕುಮಾರ್‌ ರೈ ಹೇಳಿದರು. ಸದ್ಯವೇ ದೆಹಲಿಗೆ ಭೇಟಿ  ನೀಡಿ ನಿರ್ಮಲಾ ಸೀತಾರಾಮ್‌  ಅವರನ್ನು ಭೇಟಿಯಾಗಿದೆ ಅಡಿಕೆ ಆಮದು ಕಡಿವಾಣಕ್ಕೆ ಒತ್ತಾಯಿಸಲಾಗುವುದು  ಎಂದು ಅಶೋಕ್‌ ಕುಮಾರ್‌ ರೈ ಹೇಳಿದರು.

Advertisement

ಈಗಾಗಲೇ ಅಡಿಕೆ ಬೆಳೆಗಾರರು ಹಳದಿ ಎಲೆರೋಗ, ಎಲೆಚುಕ್ಕಿ ರೋಗದಿಂದ ಕಂಗಾಲಾಗಿದ್ದಾರೆ. ಪಾಣಾಜೆ ಪ್ರದೇಶದಲ್ಲೂ ಹಳದಿ ಎಲೆರೋಗ ಇರುವ ಬಗ್ಗೆ ಮಾಹಿತಿ ಇದೆ. ಇದಕ್ಕಾಗಿ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ, ಸಿಪಿಸಿಆರ್‌ ಐ ವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.

Advertisement

ಅಡಿಕೆ ಬೆಳೆಗಾರರಿಗೆ ಬೆಳೆವಿಮೆ ತೀರಾ ಪ್ರಯೋಜನವಾಗಿದೆ. ಕೆಲವರು ಇದು ಕೇಂದ್ರ ಸರ್ಕಾರದ ಕೊಡುಗೆ ಎಂದು ಹೇಳಿದ್ದಾರೆ.ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರದ ಪಾಲು, ರೈತರ ಪಾಲೂ ಇದೆ. ಕೇಂದ್ರ ಸರ್ಕಾರ ಮಾತ್ರವೇ ಬೆಳೆ ವಿಮೆ ನೀಡುವುದಲ್ಲ. ಕೇಂದ್ರ ಸರ್ಕಾರ ಮಾತ್ರವೇ ಬೆಳೆವಿಮೆ ನೀಡುವುದಾದರೆ ಪಕ್ಕದ ಕೇರಳ ರಾಜ್ಯದ ಅಡಿಕೆ ಬೆಳೆಗಾರರಿಗೆ ಏಕೆ ಸಿಗುತ್ತಿಲ್ಲ ಎಂದು ಅಶೋಕ್‌ ಕುಮಾರ್‌ ರೈ ಪ್ರಶ್ನಿಸಿದರು.

Arecanut prices now falling. The central government should immediately change the import policy. Puttur MLA Ashok Kumar Rai has demanded that appropriate action should be taken to prevent the import of Arecanut.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ
ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ
November 25, 2024
8:07 PM
by: The Rural Mirror ಸುದ್ದಿಜಾಲ
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ
November 25, 2024
8:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror