ಅಡಿಕೆ ಬೆಳೆಗಾರರ ಹಿತಕ್ಕಾಗಿ ಸದಾ ಕೆಲಸ ಮಾಡುತ್ತೇನೆ. ಈಗ ಅಡಿಕೆ ಆಮದು ತಡೆಗೆ ತಕ್ಷಣವೇ ಕ್ರಮವಾಗಬೇಕು. ಇದಕ್ಕಾಗಿ ಸಂಸದರು, ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆಮದು ಕಡಿವಾಣಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಡಿಕೆ ಆಮದು ಬಗ್ಗೆ ಈಗಾಗಲೇ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಈಚೆಗೆ ಬೆಂಗಳೂರಿನಲ್ಲಿ 12 ಮೆಟ್ರಿಕ್ ಟನ್ ಅಡಿಕೆ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಬಳಿ ಅಧೀವೇಶನದಲ್ಲಿ ಪ್ರಸ್ತಾಪಿಸಲಾಗಿತ್ತು. ಚಾಲಿ ಅಡಿಕೆ ಹೆಚ್ಚಾಗಿ ಇರುವುದು ಕರಾವಳಿ ಭಾಗದಲ್ಲಿ. ಈಗ ಇಲ್ಲಿನ ಅಡಿಕೆ ಜೊತೆಗೆ ಮಿಶ್ರಣ ಮಾಡಿ ಅಡಿಕೆ ಮಾರಾಟ ಮಾಡುವ ಬಗ್ಗೆ ವರದಿಗಳು ಇದೆ. ಹೀಗಾಗಿ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಹಾಗೂ ಆಮದು ಕಡಿವಾಣ ಮಾಡಲು ಕೇಂದ್ರ ಸಚಿವರು, ಸಂಸದರು ಹಾಗೂ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಆಮದು ಕಡಿವಾಣಕ್ಕೆ ಒತ್ತಾಯಿಸುತ್ತೇನೆ. ಅಡಿಕೆ ಬೆಳೆಗಾರರ ಜೊತೆ ಇದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.