ಯಾರಿಗೂ ಚಪ್ಪಲಿಯನ್ನು ಹಾಕಿ ಸಂತೋಷವನ್ನು ಪಡುವ ದುಸ್ಥಿತಿಗಳು ನಮಗೆ ಬಂದಿಲ್ಲ.ಚಪ್ಪಲಿ ಹಾಕಿರುವ ಸಂಗತಿ ಖಂಡನೀಯ. ಬ್ಯಾನರ್ ವಿಷಯದಲ್ಲಿ ಬಿಜೆಪಿಯವರು ಪ್ರತಿಭಟನೆ ಎಂಬ ನಾಟಕದ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಆರೋಪಿಸಿದ್ದಾರೆ.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇಂತಹ ಹೇಳಿಕೆಗಳು ಇನ್ನೂ ಬಿಜೆಪಿಯವರಿಂದ ನಡೆಯುತ್ತದೆ. ಆದರೆ ನಮಗೆ ಅನಗತ್ಯವಾಗಿ ಟೀಕಿಸುವ ಅಗತ್ಯ ಇಲ್ಲ. ಕಾಂಗ್ರೆಸ್ ಪಕ್ಷ ಬಂದರೆ ಅಶಾಂತಿ ಉಂಟಾಗುತ್ತದೆ ಎಂದು ಭಯ ಹುಟ್ಟಿಸುವ ಬಿಜೆಪಿಗರು ಅನಗತ್ಯವಾಗಿ ಬ್ಯಾನರ್ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪುತ್ತೂರು ಮಾಜಿ ಶಾಸಕರು ಇಂದು ಅಧಿಕಾರ ಬಿಟ್ಟು ಹೊರಗೆ ಬಂದಿದ್ದು, ಮಾತ್ರವಲ್ಲ ಅವರು ಹಿಂದು ಕಾರ್ಯಕರ್ತರಿಗೇ ದಿಕ್ಕಾರ ಕೂಗಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರವನ್ನು ನೀಡಬೇಕಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಹೇಳಿದರು.