ಚುನಾವಣಾ ಕಣದಲ್ಲಿ ಈ ಬಾರಿ ಪುತ್ತೂರು ಕ್ಷೇತ್ರವು ಎಲ್ಲೆಡೆಯಿಂದಲೂ ಗಮನ ಸೆಳೆದಿದೆ. ಯಾರಾಗಬಹುದು ಶಾಸಕರು ಎನ್ನುವ ಕುತೂಹಲ ಎಲ್ಲೆಡೆಯೂ ಇದೆ ಈ ನಡುವೆ ಕುಮಾರಸುಬ್ರಹ್ಮಣ್ಯ ಮುಳಿಯಾಲ ಅವರು ಕೇರಳದ ಪ್ರಸಿದ್ಧ ಜ್ಯೋತಿಷಿಯೊಬ್ಬರ ಬಳಿ ಸಂಖ್ಯಾಶಾಸ್ತ್ರದ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಅವರು ಮಾಡಿರುವ ವಿಶ್ಲೇಷಣೆ ಇಲ್ಲಿದೆ…
17 – 04- 2023 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಿದ ದಿನ.ಇದನ್ನು ಎಲ್ಲಾ ಕೂಡಿಸಿದರೆ ಸಂಖ್ಯೆ1. ಬರುತ್ತದೆ. ಚುನಾವಣಾ ದಿನಾಂಕ 10 . ಇದನ್ನೂ ಕೂಡಿಸಿದರೆ ಸಂಖ್ಯೆ1 . ಸೂರ್ಯನಿಂದ ಆಳಲ್ಪಡುವ ಈ ಸಂಖ್ಯೆ ನಾಯಕತ್ವದ ಗುಣ ಸೂಚಿಸುತ್ತದೆ .ಇವರು ತುಂಬಾ ಪ್ರಖರರು ಮತ್ತು ಪ್ರಮುಖರಾಗಿರುತ್ತಾರೆ ಇದು ಪ್ರಥಮ ಎಂಬುದನ್ನು ಸೂಚಿಸುತ್ತದೆ. ಅಂದರೆ ಗೆಲುವು ಎಂದು ಅರ್ಥ ಅಥವಾ ಹೊಸ ಶಖೆಯ ಪ್ರಾರಂಭ ಎಂಬ ಅರ್ಥ .ಶ್ರೇಣಿಯಲ್ಲಿ ಮೊದಲಿಗರಾಗುತ್ತಾರೆ ಎಂಬುದಾಗಿ ಯೋಚಿಸಬಹುದು.
ದಿನಾಂಕ17 ,ಅಂದರೆ ಸಂಖ್ಯೆ 8. ಎಂಟು ಅಷ್ಠದಿಕ್ಪಾಲಕರು ಎಂದು ಅರ್ಥ. ಇದರಿಂದ ಅಷ್ಠ ದಿಕ್ಪಾಲಕರ ಅನುಗ್ರಹ ಇದೆ ಎಂದು ತಿಳಿಯಬಹುದು. ಪುತ್ತಿಲರ ಕ್ರಮ ಸಂಖ್ಯೆ 7 . ಸಂಖ್ಯೆ 7 ಮಾತ್ರ ಸಾರ್ವತ್ರಿಕವಾಗಿ ಎಲ್ಲರಿಗೂ ಲಕ್ಕಿ7ನಂಬರ್. ಹಾಗಾಗಿಯೇ ಈ ಸಂಖ್ಯೆಯನ್ನು ಮಂಗಳಕರ, ಶುಭಪ್ರದ ಭಾವಿಸಿ ಆ ದಿನಂದಂದು ತಮ್ಮ ಕೆಲಸಕಾರ್ಯಗಳನ್ನು ಆರಂಭಿಸುತ್ತಾರೆ. ಅಂದರೆ ಪುತ್ತಿಲ ರ ಗೆಲುವುವಿನ ಶುಭಾರಂಭದ ಸಂಖ್ಯೆ ಅವರ ಕ್ರಮ ಸಂಖ್ಯೆಯಾಗಿ ಒದಗಿ ಬಂದಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಂಖ್ಯೆ 7 ಚಂದ್ರನನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಹುಟ್ಟಿದವರು ಸ್ವತಂತ್ರವಾಗಿ ಇರಲು ಬಯಸುತ್ತಾರೆ. ಇವರದು ತುಂಬಾ ತೀಕ್ಷ್ಣವಾದ ವ್ಯಕ್ತಿತ್ವ. ತಮ್ಮಷ್ಟಕ್ಕೆ ತಾವೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರದು ವಿರಾಮ ಇಲ್ಲದಂತೆ ದುಡಿಯುವ ಜಾಯಮಾನ . ಪುತ್ತಿಲ ರದ್ದು ಇದೆ ವ್ಯಕ್ತಿತ್ವ. ಸಂಖ್ಯೆ7 ಸಪ್ತ ಋಷಿಗಳ ಪ್ರತೀಕ ಹಾಗಾಗಿ ನಮ್ಮ ಸನಾತನ ನಂಬಿಕೆಯ ಸಪ್ತಋಷಿಗಳ ಅನುಗ್ರಹವೂ ಪುತ್ತಿಲರಿಗೆ ಇದೆ ಎಂದಾಯಿತು. ಅಂದರೆ ಒಂದು ಕಡೆಯಿಂದ ದೇವಾದಿ ದೇವತೆಗಳ ಅನುಗ್ರಹ, ಋಷಿಗಳ ಯೋಗಿಗಗಳ ಅನುಗ್ರಹ, ಪ್ರಕೃತಿಯ ಅನುಗ್ರಹ, ಅಸಂಖ್ಯ ಸಂಖ್ಯೆಯ ಜನರ ಅನುಗ್ರಹ , ಸ್ವಂತದ ಸಂಕಲ್ಪ ಶಕ್ತಿ, ಹಿಂದುತ್ವದ ಭಾರತ ಮಾತೆಯ ಶ್ರಿರಕ್ಷೆ. ಹೀಗೇ ಎಲ್ಲಾ ಶಕ್ತಿಗಳೂ ಒಂದೇ ಕಡೆಗೆ ಕೇಂದ್ರೀಕೃತವಾಗಿರುವುದರಿಂದ ಅರುಣ್ ಕುಮಾರ್ ಅವರ ಪರವಾಗಿಯೇ ಅಲೆ ಕಂಡುಬರುತ್ತಿದೆ.
ಹೀಗೆ ಜಗತ್ತಿನ ಎಲ್ಲಾ ಅನುಗ್ರಹ ಕಾರಕ ಶಕ್ತಿಗಳು ಪುತ್ತಿಲರ ಪರವಾಗಿ ಇರುವಾಗ , ಮತ್ತು ಅವರು ನಾಮಪತ್ರ ಸಲ್ಲಿಸುವಾಗ ಕತ್ತಲೆಯ ಅಮಾವಾಸ್ಯೆಯಾಗಿರದೆ ಭರವಸೆಯ ಬೆಳಕು ಬೆಳಗುತ್ತಿರುವಾಗ ಪ್ರತಿಸ್ಪರ್ದಿಗಳಿಗೆ ಗೆಲುವು ಮರೀಚಿಕೆಯೇ ಸರಿ. ಇಷ್ಟು ವರ್ಷಗಳಲ್ಲಿ ಏನಾಗಿದೆ ಎಂಬುದು ಲೆಕ್ಕಾಚಾರ ಅಲ್ಲ, ಈ ಸಲ ಈ ಬಾರಿಯ ಸ್ಪರ್ಧಾ ಕಣದಲ್ಲಿ ಪುತ್ತಿಲರೋ ಪ್ರತಿಸ್ಪರ್ದಿಗಳೋ ಎಂಬ ಕಾಲಘಟ್ಟದಲ್ಲಿ ಪ್ರಪಂಚದ ಸಕಲ ಶಕ್ತಿಗಳು ಪುತ್ತಿಲರ ಪರವಾಗಿದೆ. ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಈ ಬಾರಿ ಪುತ್ತೂರಿಗೆ ಪುತ್ತಿಲ ಎಂಬ ಟ್ರೆಂಡ್ ಕೂಡಾ ಸರಿಯಾಗುತ್ತಿದೆ.