ಪುತ್ತೂರು ಮಿನಿ‌ವಿಧಾನ ಸೌಧದಲ್ಲಿ ಕೈ ಕೊಟ್ಟ ಲಿಫ್ಟ್…..!! : ವಿಕಲಚೇತನರಿಗೆ ಸಂಕಷ್ಟ

January 22, 2021
1:04 PM

ಸರ್ವ ಸುಸಜ್ಜಿತ ಪುತ್ತೂರು ಮಿನಿ‌ವಿಧಾನ ಸೌಧ. ಸಮರ್ಥ ಶಾಸಕರು. ಹಾಗಿದ್ದರೂ ಪುತ್ತೂರು ಮಿನಿವಿಧಾನ ಸೌಧದ ಲಿಫ್ಟ್ ವ್ಯವಸ್ಥೆ ಕೈಕೊಟ್ಟಿದೆ. ಇದರಿಂದಾಗಿ ವಿಕಲಚೇತನರು ಸಂಕಷ್ಟ ಪಡಬೇಕಾಗಿದೆ. ಶುಕ್ರವಾರ ವೀಲ್ ಚಯರ್ ಮೂಲಕ ವಿಕಲಚೇತನರೊಬ್ಬರನ್ನು ಕಚೇರಿಯಲ್ಲಿನ ತುರ್ತು ಕೆಲಸಕ್ಕೆ ಕರೆತಂದ ವಿಡಿಯೋ ಈಗ ವೈರಲ್ ಆಗಿದೆ.

ಪುತ್ತೂರು ಮಿನಿವಿಧಾನ ಸೌಧ ಸರ್ವ ಸುಸಜ್ಜಿತವಾಗಿ‌ ನಿರ್ಮಾಣವಾಗಿದೆ.‌ಎಲ್ಲಾ ಕಚೇರಿಗಳೂ ಒಂದೇ ಕಡೆ ಇರಬೇಕು ಎಂಬುದು ಸರಕಾರದ ಉದ್ದೇಶ. ಆದರೆ ಆರಂಭದಲ್ಲಿ ನೋಂದಣಿ‌ ಇಲಾಖೆ ಮಿನಿವಿಧಾನ ಸೌಧಕ್ಕೆ‌ ವರ್ಗಾವಣೆ ಆಗುವುದಕ್ಕೆ ನೀಡಿರುವುವ ಕಾರಣವೂ ಇದೇ ಆಗಿತ್ತು. ಅಲ್ಲಿನ ಮೇಲಿನ‌ ಮಹಡಿಗೆ ವಿಕಲಚೇತನರಿಗೆ ತೆರಳಲು ಕಷ್ಟ ಎನ್ನುವ ಮಾತಿತ್ತು.‌ಇದಕ್ಕಾಗಿ ಆಗಿನ ಸಹಾಯಕ ಕಮೀಶನರ್, ಈಗಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ಲಿಫ್ಟ್ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಂಡು ಎಲ್ಲಾ ಇಲಾಖೆಗಳೂ ಒಂದೇ ಕಡೆ ಲಭ್ಯವಾಗುವಂತೆ, ವಿಕಲಚೇತನರಿಗೂ ವ್ಯವಸ್ಥೆ ಆಗುವಂತೆ ಮಾಡಿದ್ದರು.

ಇದೀಗ ಲಿಫ್ಟ್ ವ್ಯವಸ್ಥೆ ಹಾಳಾಗಿ 15 ದಿನ ಕಳೆದರೂ ದುರಸ್ತಿಯಾಗಿಲ್ಲ.‌ಹೀಗಾಗಿ ಸಮಸ್ಯೆ ಆಗಿದೆ ಎಂದು ದೂರುತ್ತಾರೆ ವಿಕಲಚೇತನರು. ಶಾಸಕರ ಕಚೇರಿಯೂ ಇದೇ ಮಿನಿವಿಧಾನ ಸೌಧದಲ್ಲಿದ್ದರೂ ವ್ಯವಸ್ಥೆ ಸುಧಾರಿಸದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ
ಸ್ಥಳೀಯ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲು ಚಿಂತನೆ | ಸದ್ಯ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ |
March 18, 2025
8:13 PM
by: The Rural Mirror ಸುದ್ದಿಜಾಲ
ಅಮೆರಿಕದ ಹಲವು ರಾಜ್ಯಗಳಲ್ಲಿ ಚಂಡಮಾರುತ-ಸುಳಿಗಾಳಿ; ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ
March 18, 2025
7:57 PM
by: The Rural Mirror ಸುದ್ದಿಜಾಲ
ಉತ್ತರ ಒಳನಾಡಿನಲ್ಲಿ ಬಿಸಿಹವೆ – ಹವಾಮಾನ ಇಲಾಖೆ ಮುನ್ಸೂಚನೆ
March 18, 2025
7:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror