ಸಾಮಾನ್ಯವಾಗಿ ಹೆಬ್ಬಾವು ಮನುಷ್ಯರನ್ನು ನುಂಗುವುದಿಲ್ಲ ಎಂಬುದು ವಾದ. ಆದರೆ ಭಾರತ ಹೊರತುಪಡಿಸಿ ಇತರ ಕೆಲವು ದೇಶಗಳಲ್ಲಿನ ಹೆಬ್ಬಾವು ಪ್ರಬೇಧವು ಮನುಷ್ಯರನ್ನೂ ನುಂಗುತ್ತವೆ. ಇಂಡೋನೇಷ್ಯಾದ ಜಾಂಬಿ ಪ್ರಾಂತ್ಯದಲ್ಲಿ ಮಹಿಳೆಯೊಬ್ಬರನ್ನು ಹೆಬ್ಬಾವು ಕೊಂದು ಸಂಪೂರ್ಣ ನುಂಗಿದೆ ಎಂದು ವರದಿಯಾಗಿದೆ.
ಸುಮಾರು 50 ವರ್ಷದ ಮಹಿಳೆ ಬೆಳಗ್ಗೆ ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಟ್ಯಾಪಿಂಗ್ ಗೆ ಹೋದವರು ನಾಪತ್ತೆಯಾಗಿದ್ದರು. ಇಡೀ ದಿನ ಅವರ ಮನೆಯವರುಯ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಟ್ಯಾಪಿಂಗದ ಸಾಮಾಗ್ರಿಗಳು ರಬ್ಬರ್ ತೋಟದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಗ್ರಾಮಸ್ಥರು ತಂಡಗಳ ಮೂಲಕ ಹುಡುಕಾಡಿದರು. ಈ ಸಂದರ್ಭ ಗ್ರಾಮಸ್ಥರಿಗೆ ಹೆಬ್ಬಾವು ಕಾಣಿಸಿದ್ದು, ಅದರ ಹೊಟ್ಟೆ ಮನುಷ್ಯರನ್ನೇ ಹೋಲುವ ಮಾದರಿ ಇದ್ದರಿಂದ ಸಂದೇಹದಿಂದ ಹಾವನ್ನು ಕೊಂದು ಅದರೊಳಗೆ ಪತ್ತೆ ಮಾಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.
ಹೆಬ್ಬಾವು ಮನುಷ್ಯರನ್ನು ನುಂಗುವುದು ಅಪರೂಪದ ಘಟನೆ. ಆದರೆ ಇಂಡೋನೇಷ್ಯಾದಲ್ಲಿ ಹೆಬ್ಬಾವು ಕೊಂದು ತಿಂದಿರುವುದು ಇದೇ ಮೊದಲಲ್ಲ. 2017 ಮತ್ತು 2018 ರಲ್ಲಿ ಇಂತಹ ಎರಡು ಸಾವುಗಳು ವರದಿಯಾಗಿವೆ.