QR ಕೋಡ್ ಬಳಸಿ ಕೆಲಸಕ್ಕೆ ಬೇಡಿಕೆ ಸಲ್ಲಿಕೆ | ಫಲಾನುಭವಿಗಳಿಗೆ ಶೀಘ್ರ ತಲುಪಲು ಸಹಕಾರಿ

December 14, 2024
12:58 PM

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಧುನಿಕ ತಂತ್ರಜ್ಞಾನದಿಂದಾಗಿ ಫಲಾನುಭವಿಗಳನ್ನು ಶೀಘ್ರವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಮನ್ರೇಗಾ ಯೋಜನೆ ಅಡಿ ಅನ್ ಲೈನ್‌ನಲ್ಲಿ ಮೊಬೈಲ್ ಹಾಗೂ ಕ್ಯೂ ಆರ್ ಕೋಡ್ ಸಹಾಯದಿಂದಾಗಿ ಫಲಾನುಭವಿಗಳು ಕಚೇರಿ ಸುತ್ತುವ ಮತ್ತು ಸಮಯ ಪೋಲಾಗುವ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ.

Advertisement

ವೈಯಕ್ತಿಕ ವಿಭಾಗದಲ್ಲಿ ಇಂಗು ಗುಂಡಿ, ಗಿಡ ನೆಡುವಿಕೆ, ಬದು ನಿರ್ಮಾಣ ಇತ್ಯಾದಿ ಕಾಮಗಾರಿಗಳು ನಡೆದರೆ, ಸಮುದಾಯ ಕಾರ್ಯಕ್ರಮಗಳ ಅಡಿ ರಸ್ತೆ, ಚರಂಡಿ, ಕೆರೆ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿವೆ. ಅರ್ಹ ಫಲಾನುಭವಿಗಳು ಕೆಲಸದ ಬೇಡಿಕೆ, ಪೂರ್ಣವಾದ ಕಾಮಗಾರಿಗಳ ಮಾಹಿತಿಗಳನ್ನು ಈಗ ತಾವಿರುವ ಸ್ಥಳದಿಂದಲೇ ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕೆಂಬೋಡಿ ಪಂಚಾಯಿತಿಯ ರೈತ ಶಿವಕುಮಾರ್, ತೈವಾನ್ ಸೀಬೆ ಕೃಷಿ ಕೈಗೊಂಡಿದ್ದು, ಮೊಬೈಲ್ ಮತ್ತು ಕ್ಯು ಆರ್ ಕೋಡ್ನಿಂದಾಗಿ ಕೆಲಸ ಸುಲಭವಾಗಿದೆ ಎನ್ನುತ್ತಾರೆ.

ಗುಡಿಪಲ್ಲಿ ಪಂಚಾಯಿತಿಯ ರೈತ ಅಶೋಕ, ಈಗ ಕೆಲಸದ ಬೇಡಿಕೆ ಸಲ್ಲಿಸಲು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಭಾಗಿಯಾಗಬೇಕಿಲ್ಲ. ಮೊಬೈಲ್ ಮತ್ತು  ಕ್ಯೂ ಆರ್ ಕೋಡ್ ಸಹಾಯದಿಂದ ತಾವಿರುವ ಸ್ಥಳದಲ್ಲೇ ಮಾಹಿತಿ ತುಂಬಬಹುದಾಗಿದೆ ಎನ್ನುತ್ತಾರೆ.

ಪಂಚಾಯ್ತಿಗಳಲ್ಲಿ ಮನ್ರೇಗಾ ಅತ್ಯಂತ ಪ್ರಚಲಿತ ಯೋಜನೆಯಾಗಿದೆ. 1 ಸಾವಿರದ  900ಕ್ಕೂ ಹೆಚ್ಚು ಕಾರ್ಡ್ ನೀಡಲಾಗಿದೆ. ವೈಯಕ್ತಿಕ, ಸಮುದಾಯ ಎರಡೂ ವಿಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಗುಡಿಪಲ್ಲಿ ಪಂಚಾಯಿತಿ ಪಿಡಿಒ ರಾಮೇಗೌಡ ಮಾಹಿತಿ ನೀಡಿದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ
ಹಾವು, ಕಾಗೆ, ನಾಯಿಗಳು ಕನಸಿನಲ್ಲಿ ಬಂದ್ರೆ ನಿರ್ಲಕ್ಷ್ಯ ಮಾಡ್ಬೇಡಿ…!
April 22, 2025
6:41 AM
by: ದ ರೂರಲ್ ಮಿರರ್.ಕಾಂ
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ | ಆಲಿಕಲ್ಲು, ಗುಡುಗು ಸಹಿತ ಭಾರಿ ಮಳೆ
April 22, 2025
6:30 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group