ಕೃಷಿ ತಂತ್ರಜ್ಞಾನಗಳು ಪ್ರಯೋಗಾಲಯಗಳಿಂದ ಶೀಘ್ರವಾಗಿ ಕೃಷಿ ಭೂಮಿಗೆ ವರ್ಗಾವಣೆಯಾಗಬೇಕು

March 24, 2025
8:52 PM
ಭಾರತವನ್ನು ಕೃಷಿ ಕ್ಷೇತ್ರದಲ್ಲಿ ನಾಯಕನನ್ನಾಗಿ ಮಾಡಲು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ, ದೇಶದ ಹಲವಾರು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದಾಯವನ್ನು ಹೆಚ್ಚಿಸಲು ಹೊಸತಂತ್ರಗಳು ವಿಶೇಷವಾಗಿ ಅಗತ್ಯವಾಗಿವೆ.

ದೇಶದಲ್ಲಿ ಹಲವಾರು ಕೃಷಿ ಸಂಶೋಧನೆಗಳು ನಡೆಯುತ್ತವೆ. ವಿನೂತನವಾದ ತಂತ್ರಜ್ಞಾನಗಳನ್ನು ವಿಜ್ಞಾನಿಗಳು ಕಂಡುಹಿಡಿಯುತ್ತಾರೆ. ಆಧುನಿಕ ಕೃಷಿ ಪದ್ದತಿಗಳ ಬಗ್ಗೆಯೂ ಅಧ್ಯಯನ ಮಾಡುತ್ತಾರೆ. ಆದರೆ ಈ ಅಧ್ಯಯನಗಳು ಕೃಷಿ ಭೂಮಿಗೆ ತಲಪುವುದು, ರೈತರಿಗೆ ತಲಪುವುದು ತಡವಾಗುತ್ತದೆ.  ರೈತರಿಗೆ ತಲಪಿಸುವುದು ವಿಜ್ಞಾನಿಗಳ ಕೆಲಸವಲ್ಲ.  ಹೀಗಾಗಿ ಈಗ ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಶೀಘ್ರದಲ್ಲಿ ಕೃಷಿ ಭೂಮಿಗೆ ತಲಪಿಸುವ ವ್ಯವಸ್ಥೆ ಆಗಬೇಕಾಗಿದೆ. ಈ ಬಗ್ಗೆ ದೇಶದ ಕೃಷಿ ಸಚಿವಾಲಯದ ಆಸಕ್ತಿ ವಹಿಸಿದೆ. ಈ ಬಗ್ಗೆ ಕೃಷಿ ಸಚಿವರು ಕಳೆದ ವಾರದ ನಡೆದ ಕಾರ್ಯಕ್ರಮದಲ್ಲಿ ಈ ವಿಷಯ ಫೋಕಸ್‌ ಮಾಡಿದರು.

Advertisement

ರೈತರಿಗೆ ಅನುಕೂಲವಾಗುವಂತೆ ಪ್ರಯೋಗಾಲಯಗಳಿಂದ ಹೊಲಗಳಿಗೆ ಕೃಷಿ ತಂತ್ರಜ್ಞಾನಗಳನ್ನು ವೇಗವಾಗಿ ವರ್ಗಾಯಿಸುವ ಅಗತ್ಯದ ಬಗ್ಗೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್  ಹೇಳಿದರು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ 63 ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಜಾಗತಿಕ ಸವಾಲುಗಳನ್ನು ಎದುರಿಸಲು ಕೃಷಿ ಯಂತ್ರೋಪಕರಣಗಳು, ಸ್ಮಾರ್ಟ್ ಕೃಷಿ ಮತ್ತು ಮುಂದುವರಿದ ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ ಕೃಷಿಯಲ್ಲಿ ಅಗತ್ಯ ಇರುವುದರ ಬಗ್ಗೆ ಸಚಿವರು ಗಮನ ಸೆಳೆದರು. ಭಾರತವನ್ನು ಕೃಷಿ ಕ್ಷೇತ್ರದಲ್ಲಿ ನಾಯಕನನ್ನಾಗಿ ಮಾಡಲು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ, ದೇಶದ ಹಲವಾರು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದಾಯವನ್ನು ಹೆಚ್ಚಿಸಲು ಹೊಸತಂತ್ರಗಳು ವಿಶೇಷವಾಗಿ ಅಗತ್ಯವಾಗಿವೆ ಎಂದು ಅವರು ಹೇಳಿದರು.

ಭಾರತದ ಕೃಷಿ ಬೆಳವಣಿಗೆ ದರವು ಪ್ರಸ್ತುತ ಶೇಕಡಾ 5 ರಷ್ಟಿದೆ, ಸದ್ಯ ರೈತರ  ಪ್ರಯತ್ನಗಳಿಂದಾಗಿ ಆಹಾರ ಉತ್ಪಾದನೆಯೂ ಉತ್ತಮವಾಗಿದೆ. ಆದರೆ ಸುಸ್ಥಿರ ಕೃಷಿ, ಹವಾಮಾನ-ನಿರೋಧಕ ಕೃಷಿ,  ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಅಗತ್ಯ ಇದೆ ಎಂದು ಸಚಿವರು ಎಚ್ಚರಿಸಿದರು. ಸಂಶೋಧನೆ,  ಉದ್ಯಮಶೀಲತೆ ಮತ್ತು ನವೋದ್ಯಮಗಳ ಮೂಲಕ ಕೃಷಿ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು, ಯುವಜನತೆ ಗಮನಹರಿಸಬೇಕು ಎಂದು ಸಚಿವರು ಹೇಳಿದರು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೊಡಗು ಜಿಲ್ಲೆ | ಬೇಸಿಗೆ  ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಕ್ರಮಕ್ಕೆ ಸೂಚನೆ
March 27, 2025
7:35 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದಲ್ಲಿ ಸಮರ್ಪಕ ಭೂದಾಖಲೆಗಳೊಂದಿಗೆ ವಾಸಿಸುತ್ತಿರುವವರ ಒಕ್ಕೆಲೆಬ್ಬಿಸದಿರಿ
March 27, 2025
7:27 AM
by: ದ ರೂರಲ್ ಮಿರರ್.ಕಾಂ
ಎ.12 ರಿಂದ ಮಂಗಳ ಗ್ರಹವು 8 ರಾಶಿಗಳ ಮೇಲೆ ಅಮಂಗಳ ಪರಿಣಾಮ
March 27, 2025
5:57 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |
March 26, 2025
1:29 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group