ಕಾಯಿದೆ ಬದಲಾವಣೆಗೆ ವಾಣಿಜ್ಯ ಸಚಿವಾಲಯ ಚಿಂತನೆ | ರಬ್ಬರ್ ಸೇರಿದಂತೆ ವಾಣಿಜ್ಯ ಬೆಳೆ ಉತ್ತೇಜನಕ್ಕೆ ಕ್ರಮ |

January 31, 2022
8:02 PM

ವಾಣಿಜ್ಯ ಸಚಿವಾಲಯವು ಚಹಾ, ಕಾಫಿ ಸಾಂಬಾರ ಪದಾರ್ಥಗಳು ಮತ್ತು ರಬ್ಬರ್‌ಗೆ ಸಂಬಂಧಿಸಿದ ಹಳೆಯ ಕಾನೂನುಗಳನ್ನು ರದ್ದಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ. ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಬರುವ  ಈ ಕ್ಷೇತ್ರಗಳ ಕೃಷಿ ಹಾಗೂ ವಾಣಿಜ್ಯ ವಹಿವಾಟು ಉತ್ತೇಜಿಸುವ ಮತ್ತು ವ್ಯವಹಾರಗಳಿಗೆ ಅನುಕೂಲಕರ ವಾತಾವರಣನ್ನು ಸೃಷ್ಟಿಸುವ ದೃಷ್ಟಿಯಿಂದ ಹೊಸ ಕಾನೂನುಗಳನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಕೃಷಿ ಹಾಗೂ ವಾಣಿಜ್ಯ ವ್ಯವಹಾರ ಉತ್ತೇಜನಗೊಳ್ಳಲಿದೆ ಎನ್ನುವ ನಿರೀಕ್ಷೆ ಇದೆ.

ನಾಲ್ಕು ಪ್ರತ್ಯೇಕ ಕಾಯಿದೆ ಬದಲಾವಣೆಗಳನ್ನು ಉಲ್ಲೇಖಿಸಲಾಗಿದೆ. ವಾಣಿಜ್ಯ ಇಲಾಖೆಯು ಟೀ ಆಕ್ಟ್ 1953, ಮಸಾಲೆ ಮಂಡಳಿ ಕಾಯಿದೆ 1986, ರಬ್ಬರ್ ಕಾಯಿದೆ 1947 ಮತ್ತು ಕಾಫಿ ಕಾಯಿದೆ 1942 ರ ರದ್ದುಪಡಿಸಲು ಪ್ರಸ್ತಾಪಿಸಿದೆ. ವಾಣಿಜ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಕರಡು ಮಸೂದೆಗಳ ಪ್ರಕಾರ, ಕಾಯಿದೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಪ್ರಸ್ತುತ  ಉದ್ದೇಶಗಳನ್ನು ಪ್ರತಿಬಿಂಬಿಸಲು ಹೊಸ ಶಾಸನಗಳನ್ನು ಜಾರಿಗೊಳಿಸಲಾಗಿದೆ.

ಕರಾಡು  ಮಸೂದೆ 2022 ರ ಪ್ರಕಾರ, ಪೂರೈಕೆ ಸರಪಳಿಯ ಕಡೆಗೆ ಕೇಂದ್ರೀಕೃತ ಗಮನವನ್ನುನೀಡಲಾಗಿದೆ.  ಟೀ ಕಾಯಿದೆಯ ರದ್ದತಿಯನ್ನು ಪ್ರಸ್ತಾಪಿಸಲು ಪ್ರಮುಖ ಕಾರಣವೆಂದರೆ, ಇತ್ತೀಚಿನ ದಶಕದಲ್ಲಿ ಚಹಾವನ್ನು ಬೆಳೆಯುವ, ಮಾರಾಟ ಮಾಡುವ ಮತ್ತು ಸೇವಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಮಹತ್ತರ  ಬದಲಾವಣೆಯಾಗಿದೆ. ಹೀಗಾಗಿ ಆಸ್ತಿತ್ವದಲ್ಲಿರುವ ಕಾಯಿದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಅದೇ ರೀತಿ ರಬ್ಬರ್‌ ಬೆಳೆಗೆ ಉತ್ತೇಜನ ನೀಡಲು ಆಮದು ಹಾಗೂ ರಪ್ತು ಮೇಲೆಯೂ ಗಮನಹರಿಸಲಾಗುತ್ತಿದೆ. ಇದರಿಂದ ಇಲ್ಲಿನ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗುವ ಉದ್ದೇಶ ಹೊಂದಲಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror