ದೇಶದಲ್ಲಿ ಈ ಬಾರಿ ಉತ್ತಮ ಮಳೆ ಹಾಗೂ ಚಳಿಯೂ ಉತ್ತಮವಾಗಿರುವುದರಿಂದ ಹಿಂಗಾರು ಬೆಳೆ ಬೆಳೆಯುವ ರಾಜ್ಯಗಳಲ್ಲಿ ಉತ್ತಮ ಬೆಳೆ ನಿರೀಕ್ಷೆ ಇದೆ ಎಂದು ಕೃಷಿ ಸಚಿವಾಲಯವು ಶುಕ್ರವಾರ ತಿಳಿಸಿದೆ.
ಸಾಕಷ್ಟು ಉತ್ತಮ ಚಳಿಗಾಲ ಹಾಗೂ ಈ ಬಾರಿ ಮಳೆಯೂ ನಿರೀಕ್ಷಿತವಾಗಿ ಆಗಿದೆ. ಹೀಗಾಗಿ ಅತ್ಯಂತ ಉತ್ತಮ ನೀರಿನ ಜಲಾಶಯವೂ ಉಂಟಾಗಿದೆ. ಹಿಂಗಾರು ಬೆಳೆಗೆ ಮಣ್ಣಿನ ತೇವಾಂಶದ ಸ್ಥಿತಿಯ ಲಭ್ಯತೆಯು ಮುಂಬರುವ ಬೆಳೆಗಳಾದ ಬೇಳೆಕಾಳುಗಳು, ಜೋಳ, ಹಣ್ಣುಗಳು ಮತ್ತು ತರಕಾರಿಗಳಿಗೆ ಉತ್ತಮ ನಿರೀಕ್ಷೆಯನ್ನು ಸೂಚಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಶುಕ್ರವಾರ ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಎಲ್ಲಾ ರಬಿ ಅಥವಾ ಹಿಂಗಾರು ಬೆಳೆಗಳ ಒಟ್ಟು ವಿಸ್ತೀರ್ಣವು 2021-22 ಋತುವಿನಲ್ಲಿ 672 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಮತ್ತು ಇತರ ಧಾನ್ಯಗಳ ಬಿತ್ತೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಕೋವಿಡ್‌ನ ಮೂರನೇ ಅಲೆಯು ಚಳಿಗಾಲದ ಬೆಳೆಗಳ ಬಿತ್ತೆನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿದೆ.