ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತಕ್ಕೆ ಒಳಗಾದ ಪ್ರದೇಶದಲ್ಲಿ ಭಾರತೀಯ ಸೇನೆಯು ಅತ್ಯಾಧುನಿಕ ರಾಡಾರ್ ವ್ಯವಸ್ಥೆಯೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭ ರಕ್ಷಣಾ ಸಿಬಂದಿಗಳು ಉಸಿರಾಟವನ್ನು ಸೂಚಿಸುವ ಸಂಕೇತವನ್ನು ಪತ್ತೆಹಚ್ಚಿದ್ದಾರೆ, ಆದರೆ ಇದು ಮನುಷ್ಯ ಅಥವಾ ಪ್ರಾಣಿಯದ್ದಾಗಿರಬಹುದು ಎಂದು ಹೇಳಿದ್ದಾರೆ.
ಭೂಕುಸಿತಕ್ಕೆ ತೀವ್ರ ಹಾನಿಗೊಳಗಾದ ಮುಂಡಕ್ಕೈ ಗ್ರಾಮದಲ್ಲಿ ಈ ಹಿಂದೆ ಮನೆ ಇದ್ದ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ರಾಡಾರ್‌ನಲ್ಲಿ ‘ಬ್ಲೂ ಸಿಗ್ನಲ್’ ಬಂದಿತ್ತು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದ್ದಾರೆ. “ಉಸಿರಾಟದ ಸ್ಥಿರ ಸಂಕೇತವಿದೆ” ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದರು.ಕಟ್ಟಡದ ಅವಶೇಷಗಳು ಮಣ್ಣಿನ ಕೆಳಭಾಗದಲ್ಲಿ ಸುಮಾರು ಎರಡು-ಮೂರು ಮೀಟರ್ ಕೆಳಭಾಗದಲ್ಲಿ ಇದ್ದು , ಉಸಿರಾಟದ ಸಂಕೇತವು ಮನುಷ್ಯ ಅಥವಾ ಪ್ರಾಣಿಯದ್ದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.
ಸ್ಥಳೀಯ ನಿವಾಸಿಗಳ ಪ್ರಕಾರ, ಮನೆಯ ಅಡುಗೆ ಕೋಣೆ ಮತ್ತು ಸ್ಟೋರ್ ರೂಂ ಇರುವ ಪ್ರದೇಶದಲ್ಲಿ ಸಿಗ್ನಲ್ ಪತ್ತೆಯಾಗಿದೆ. ಈ ಸಿಗ್ನಲ್ ಆಧರಿಸಿ, ರಕ್ಷಕರು ಸ್ಥಳಕ್ಕೆ ಅಗೆಯಲು ಪ್ರಾರಂಭಿಸಿದ್ದಾರೆ.
Source : PTI