ವಯನಾಡು ದುರಂತ | ಅವಶೇಷಗಳ ಅಡಿ ಉಸಿರಾಟದ ಸಂಕೇತ | ಸೇನೆಯ ಅತ್ಯಾಧುನಿಕ ರಾಡಾರ್‌ನಲ್ಲಿ ಸಿಗ್ನಲ್‌ |

August 2, 2024
8:02 PM

ಕೇರಳದ ವಯನಾಡು ಜಿಲ್ಲೆಯಲ್ಲಿ  ಭೂಕುಸಿತಕ್ಕೆ ಒಳಗಾದ  ಪ್ರದೇಶದಲ್ಲಿ ಭಾರತೀಯ ಸೇನೆಯು ಅತ್ಯಾಧುನಿಕ ರಾಡಾರ್ ವ್ಯವಸ್ಥೆಯೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭ  ರಕ್ಷಣಾ ಸಿಬಂದಿಗಳು ಉಸಿರಾಟವನ್ನು ಸೂಚಿಸುವ ಸಂಕೇತವನ್ನು ಪತ್ತೆಹಚ್ಚಿದ್ದಾರೆ, ಆದರೆ ಇದು ಮನುಷ್ಯ ಅಥವಾ ಪ್ರಾಣಿಯದ್ದಾಗಿರಬಹುದು ಎಂದು ಹೇಳಿದ್ದಾರೆ.

ಭೂಕುಸಿತಕ್ಕೆ ತೀವ್ರ ಹಾನಿಗೊಳಗಾದ ಮುಂಡಕ್ಕೈ ಗ್ರಾಮದಲ್ಲಿ ಈ ಹಿಂದೆ ಮನೆ ಇದ್ದ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ರಾಡಾರ್‌ನಲ್ಲಿ ‘ಬ್ಲೂ ಸಿಗ್ನಲ್’ ಬಂದಿತ್ತು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದ್ದಾರೆ. “ಉಸಿರಾಟದ ಸ್ಥಿರ ಸಂಕೇತವಿದೆ” ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದರು.ಕಟ್ಟಡದ ಅವಶೇಷಗಳು ಮಣ್ಣಿನ ಕೆಳಭಾಗದಲ್ಲಿ ಸುಮಾರು ಎರಡು-ಮೂರು ಮೀಟರ್ ಕೆಳಭಾಗದಲ್ಲಿ ಇದ್ದು , ಉಸಿರಾಟದ ಸಂಕೇತವು ಮನುಷ್ಯ ಅಥವಾ ಪ್ರಾಣಿಯದ್ದೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.

ಸ್ಥಳೀಯ ನಿವಾಸಿಗಳ ಪ್ರಕಾರ, ಮನೆಯ ಅಡುಗೆ ಕೋಣೆ ಮತ್ತು ಸ್ಟೋರ್ ರೂಂ ಇರುವ ಪ್ರದೇಶದಲ್ಲಿ ಸಿಗ್ನಲ್ ಪತ್ತೆಯಾಗಿದೆ. ಈ  ಸಿಗ್ನಲ್ ಆಧರಿಸಿ, ರಕ್ಷಕರು ಸ್ಥಳಕ್ಕೆ ಅಗೆಯಲು ಪ್ರಾರಂಭಿಸಿದ್ದಾರೆ.

Source : PTI

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?
October 6, 2026
1:39 PM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ
October 6, 2026
7:09 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್
October 6, 2026
7:03 AM
by: ದ ರೂರಲ್ ಮಿರರ್.ಕಾಂ
ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ
October 6, 2026
6:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror