ಶಾಂತಿ- ನೆಮ್ಮದಿಗೆ ಶ್ರದ್ಧಾಭಕ್ತಿಯ ಪೂಜೆಯೇ ಸಾಧನ : ರಾಘವೇಶ್ವರ ಶ್ರೀ

March 1, 2022
8:06 PM

ಇಡೀ ಜಗತ್ತು ಇಂದು ಶಾಂತಿ- ನೆಮ್ಮದಿಗಾಗಿ ಹಪಹಪಿಸುತ್ತಿದ್ದು, ವಿಶ್ವಾದ್ಯಂತ ಜನ ಮನಃಶಾಂತಿಯ ಹುಡುಕಾಟದಲ್ಲಿದ್ದಾರೆ. ಆದರೆ ಶ್ರದ್ಧಾಭಕ್ತಿಯ ಪೂಜೆಯಿಂದ ಪರಮಾನಂದ ಪಡೆಯಬಹುದು ಎಂಬ ಸತ್ಯದರ್ಶನ ಅವರಿಗೆ ಆಗುತ್ತಿಲ್ಲ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

Advertisement
Advertisement
Advertisement
Advertisement

ಅವರು ರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮಪ್ರದೋಷದಂದು ಲೋಕ ಹಿತಕ್ಕಾಗಿ ನಡೆದ ಅತ್ಯಪರೂಪದ ಸೋಮ ಸಪರ್ಯಾ ಧರ್ಮಸಭೆಯಲ್ಲಿಆಶೀರ್ಚನ ನೀಡಿದರು. “ಶಿವ ಶೂಲಪಾಣಿಯಾಗಿ ಪ್ರದೋಷದಂದು ಸಂಚಾರ ಮಾಡುತ್ತಾನೆ ಎಂಬ ಪ್ರತೀತಿ ಇದೆ. ಈ ಸಂದರ್ಭ ವಿಶೇಷ ಸಪರ್ಯ ನಡೆದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ರುದ್ರಪಾಠಕರು ರುದ್ರಪಠಣ ಮಾಡಿದ್ದಾರೆ. ರುದ್ರದ ಶಕ್ತಿ ಅದ್ಭುತ. ರುದ್ರಾಧ್ಯಾಯ ಎನ್ನುವುದು ಎಲ್ಲರ ಪಾಲಿಗೆ ಮಾಣಿಕ್ಯ. ಅತಿರುದ್ರ, ಮಹಾರುದ್ರಕ್ಕೂ ಮಿಗಿಲಾದ ಸೇವೆ ಇಂದು ಸಂದಿವೆ. 21600 ರುದ್ರಜಪ ನಡೆದಿದೆ. ಅಭಿಷೇಕದ ಎರಡು ಕೈಗಳ ಹಿಂದೆ ಹಲವು ಹೃದಯ, ಭಾವ, ಭಕ್ತಿಗಳು ಸೇರಿವೆ. ಶಿವನ ಅನುಗ್ರಹದಿಂಧ ಯಶಸ್ಸು- ಶ್ರೇಯಸ್ಸು, ಆನಂದ ಸುಖ ಲಭಿಸುತ್ತದೆ. ಭಕ್ತಜನರನ್ನು ಸಾಧನ ಮಾಡಿಕೊಂಡು ಚಂದ್ರಮೌಳೀಶ್ವರ ದೇಶಕ್ಕೆ ಬೆಳದಿಂಗಳು ಕರುಣಿಸಲಿ. ಚಂದ್ರಪ್ರಕಾಶದ ಬೆಳಕು ದೇಶಕ್ಕೆ ಹರಿಯಲಿ. ಪ್ರತಿಯೊಬ್ಬರ ಹೃದಯದಲ್ಲೂ ಅರಿವಿನ ದೀಪ ಬೆಳಗಿ ಇಡೀ ದೇಶಕ್ಕೆ ದೀಪೋತ್ಸವವನ್ನು ಶ್ರೀ ಚಂದ್ರಮೌಳೀಶ್ವರ ಕರುಣಿಸಲಿ” ಎಂದು ಆಶಿಸಿದರು.

Advertisement

ಗೃಹ ಸಚಿವ ಅರಗ ಜ್ಞಾನೇಂದ್ರ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಮ್ಮುಡಿ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ.ಭೀಮೇಶ್ವರ ಜೋಶಿ, ಸಿಗಂಧೂರು ಕ್ಷೇತ್ರದ ಪ್ರಧಾನ ಅರ್ಚಕ ಶೇಷಗಿರಿ ಭಟ್, ವಾಸ್ತು ತಜ್ಞ ಮಹೇಶ್ ಮುನಿಯಂಗಳ, ಶಾಸಕರಾದ ಹರತಾಳು ಹಾಲಪ್ಪ, ಬೆಳ್ಳಿ ಪ್ರಕಾಶ್, ಸುಕುಮಾರ್ ಶೆಟ್ಟಿ, ದತ್ತಾತ್ರೇಯ ಶಿವಮೊಗ್ಗ, ಅಖಿಲ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ,ಆರ್‌ ಎಸ್‌ ಎಸ್‌ ಮುಖಂಡ ಪಿ.ಎಸ್.ಪ್ರಕಾಶ್, ದಾನಿ ಹೊಸಪೇಟೆ ಶ್ರೀನಿವಾಸ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸಭಾಪೂಜೆ ನೆರವೇರಿಸಿದರು. ಚಂದ್ರಮೌಳೀಶ್ವರ ಪ್ರಕಲ್ಪದ ಮುಖ್ಯಸ್ಥ ಹರಿಪ್ರಸಾದ್ ಪೆರಿಯಾಪು ವಂದಿಸಿದರು. ಶ್ರೀಮಠದ ಧರ್ಮ ಕರ್ಮ ವಿಭಾಗದ ಶ್ರೀ ಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ನಿರೂಪಿಸಿದರು.

Advertisement
ಸೋಮ ಸಪರ್ಯ ಶಿವನ ವಿಶೇಷ ಪೂಜೆ
ಸೋಮ ಸಪರ್ಯ ಎನ್ನುವುದು ಶಿವನ ವಿಶೇಷ ಆರಾಧನೆಯಾಗಿದ್ದು, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಕರಕಮಲಗಳಿಂದ ಶ್ರೀ ಚಂದ್ರಮೌಳೀಶ್ವರನಿಗೆ ಸುವರ್ಣ, ಬೆಳ್ಳಿ, ಸುಗಂಧದ್ರವ್ಯ, ಗಂಗಾಜಲ, ನವಧಾನ್ಯ ಸೇರಿದಂತೆ 48 ಬಗೆಯ ವಿಶೇಷ ದ್ರವ್ಯಗಳಿಂದ ಈ ವಿಶೇಷ ಸಂದರ್ಭದಲ್ಲಿ ಅಭಿಷೇಕ ನಡೆಯಿತು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror