ಇಡೀ ಜಗತ್ತು ಇಂದು ಶಾಂತಿ- ನೆಮ್ಮದಿಗಾಗಿ ಹಪಹಪಿಸುತ್ತಿದ್ದು, ವಿಶ್ವಾದ್ಯಂತ ಜನ ಮನಃಶಾಂತಿಯ ಹುಡುಕಾಟದಲ್ಲಿದ್ದಾರೆ. ಆದರೆ ಶ್ರದ್ಧಾಭಕ್ತಿಯ ಪೂಜೆಯಿಂದ ಪರಮಾನಂದ ಪಡೆಯಬಹುದು ಎಂಬ ಸತ್ಯದರ್ಶನ ಅವರಿಗೆ ಆಗುತ್ತಿಲ್ಲ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅವರು ರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮಪ್ರದೋಷದಂದು ಲೋಕ ಹಿತಕ್ಕಾಗಿ ನಡೆದ ಅತ್ಯಪರೂಪದ ಸೋಮ ಸಪರ್ಯಾ ಧರ್ಮಸಭೆಯಲ್ಲಿಆಶೀರ್ಚನ ನೀಡಿದರು. “ಶಿವ ಶೂಲಪಾಣಿಯಾಗಿ ಪ್ರದೋಷದಂದು ಸಂಚಾರ ಮಾಡುತ್ತಾನೆ ಎಂಬ ಪ್ರತೀತಿ ಇದೆ. ಈ ಸಂದರ್ಭ ವಿಶೇಷ ಸಪರ್ಯ ನಡೆದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ರುದ್ರಪಾಠಕರು ರುದ್ರಪಠಣ ಮಾಡಿದ್ದಾರೆ. ರುದ್ರದ ಶಕ್ತಿ ಅದ್ಭುತ. ರುದ್ರಾಧ್ಯಾಯ ಎನ್ನುವುದು ಎಲ್ಲರ ಪಾಲಿಗೆ ಮಾಣಿಕ್ಯ. ಅತಿರುದ್ರ, ಮಹಾರುದ್ರಕ್ಕೂ ಮಿಗಿಲಾದ ಸೇವೆ ಇಂದು ಸಂದಿವೆ. 21600 ರುದ್ರಜಪ ನಡೆದಿದೆ. ಅಭಿಷೇಕದ ಎರಡು ಕೈಗಳ ಹಿಂದೆ ಹಲವು ಹೃದಯ, ಭಾವ, ಭಕ್ತಿಗಳು ಸೇರಿವೆ. ಶಿವನ ಅನುಗ್ರಹದಿಂಧ ಯಶಸ್ಸು- ಶ್ರೇಯಸ್ಸು, ಆನಂದ ಸುಖ ಲಭಿಸುತ್ತದೆ. ಭಕ್ತಜನರನ್ನು ಸಾಧನ ಮಾಡಿಕೊಂಡು ಚಂದ್ರಮೌಳೀಶ್ವರ ದೇಶಕ್ಕೆ ಬೆಳದಿಂಗಳು ಕರುಣಿಸಲಿ. ಚಂದ್ರಪ್ರಕಾಶದ ಬೆಳಕು ದೇಶಕ್ಕೆ ಹರಿಯಲಿ. ಪ್ರತಿಯೊಬ್ಬರ ಹೃದಯದಲ್ಲೂ ಅರಿವಿನ ದೀಪ ಬೆಳಗಿ ಇಡೀ ದೇಶಕ್ಕೆ ದೀಪೋತ್ಸವವನ್ನು ಶ್ರೀ ಚಂದ್ರಮೌಳೀಶ್ವರ ಕರುಣಿಸಲಿ” ಎಂದು ಆಶಿಸಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಮ್ಮುಡಿ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ.ಭೀಮೇಶ್ವರ ಜೋಶಿ, ಸಿಗಂಧೂರು ಕ್ಷೇತ್ರದ ಪ್ರಧಾನ ಅರ್ಚಕ ಶೇಷಗಿರಿ ಭಟ್, ವಾಸ್ತು ತಜ್ಞ ಮಹೇಶ್ ಮುನಿಯಂಗಳ, ಶಾಸಕರಾದ ಹರತಾಳು ಹಾಲಪ್ಪ, ಬೆಳ್ಳಿ ಪ್ರಕಾಶ್, ಸುಕುಮಾರ್ ಶೆಟ್ಟಿ, ದತ್ತಾತ್ರೇಯ ಶಿವಮೊಗ್ಗ, ಅಖಿಲ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ,ಆರ್ ಎಸ್ ಎಸ್ ಮುಖಂಡ ಪಿ.ಎಸ್.ಪ್ರಕಾಶ್, ದಾನಿ ಹೊಸಪೇಟೆ ಶ್ರೀನಿವಾಸ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸಭಾಪೂಜೆ ನೆರವೇರಿಸಿದರು. ಚಂದ್ರಮೌಳೀಶ್ವರ ಪ್ರಕಲ್ಪದ ಮುಖ್ಯಸ್ಥ ಹರಿಪ್ರಸಾದ್ ಪೆರಿಯಾಪು ವಂದಿಸಿದರು. ಶ್ರೀಮಠದ ಧರ್ಮ ಕರ್ಮ ವಿಭಾಗದ ಶ್ರೀ ಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ನಿರೂಪಿಸಿದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…