ತಾಳ್ಮೆಗೆ ತಪಸ್ಸಿನ ಫಲವಿದೆ | ಮನಸ್ಸಿಗೆ ಸಮಾಧಾನ, ವ್ಯವದಾನ ಇಲ್ಲದೇ ಯಾವ ಸಾಧನೆಯೂ ಇಲ್ಲ | ರಾಘವೇಶ್ವರ ಶ್ರೀ |

July 25, 2022
10:24 PM

ತಾಳ್ಮೆಗೆ ತಪಸ್ಸಿನ ಫಲ ಇದೆ. ತಾಳ್ಮೆ ಕಳೆದುಕೊಂಡರೆ ಅದರಿಂದ ಅನಾಹುತವಾಗುತ್ತದೆ. ಆತುರ, ಆತಂಕ, ಉದ್ವೇಗ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Advertisement
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ದುಡುಕಿ, ಅವಸರದಲ್ಲಿ ಕಾರ್ಯಗಳನ್ನು ಮಾಡಿದಾಗ ವಿಚಾರಕ್ಕೆ ಅವಕಾಶವಾಗದೇ ಅನಾಹುಗಳು ಸಂಭವಿಸುತ್ತವೆ. ಸಮರ್ಪಕತೆ ಹಾಗೂ ವೇಗ ಬರುವುದು ನಿಧಾನದ ಅಭ್ಯಾಸದಿಂದ. ತಾಳ್ಮೆಯ ಮಹತ್ವ ಇದು ಎಂದು ಬಣ್ಣಿಸಿದರು. ನಿರುದ್ವೇಗ, ನಿರಾತಂಕದಿಂದ ಕಾರ್ಯವನ್ನು ಮಾಡಿದಾಗ ಅದು ಉತ್ತಮ ಫಲ ನೀಡುತ್ತದೆ. ವೇಗ ಬರುವುದೂ ತಾಳ್ಮೆಯ ಮೂಲಕ. ತಾಳ್ಮೆಯ ಮೂಲಕ ಬಂದ ವೇಗ ಸಮರ್ಪಕತೆಗೆ ಕಾರಣವಾಗುತ್ತದೆ ಎಂದರು.

ಕಲಿಕೆಗೆ ತಾಳ್ಮೆ ಮುಖ್ಯ. ಯಾವುದನ್ನೇ ಕಲಿಯುವ ಮುನ್ನ ತಾಳ್ಮೆ ಕಲಿಯಬೇಕು. ತಾಳ್ಮೆಯ ಬದಲು ಅವಸರ ನಮ್ಮಲ್ಲಿ ಅನಗತ್ಯ ಆತಂಕವನ್ನು ಉಂಟು ಮಾಡುತ್ತದೆ. ಇದರ ಪರಿಣಾಮ ಒತ್ತಡ. ಒತ್ತಡದ ಪರಿಣಾಮ ಗ್ರಹಿಕೆಯ ಶಕ್ತಿಯನ್ನು ಬುದ್ಧಿ ಕಳೆದುಕೊಳ್ಳುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಮನಸ್ಸಿಗೆ ಸಮಾಧಾನ, ವ್ಯವದಾನ ಇಲ್ಲದೇ ಯಾವ ಸಾಧನೆಯೂ ಇಲ್ಲ. ಸಮಾಧಾನ ಕಡಿಮೆಯಾಗಿ ಅವಸರ ಹೆಚ್ಚಿದಾಗ ಅನಾಹುತಗಳು ಹೆಚ್ಚುತ್ತವೆ. ಎಲ್ಲವೂ ಬೇಕಾಗುವ ಸಮಯದಲ್ಲಿ ಆಗಬೇಕು ಎಂಬ ಧಾವಂತದಲ್ಲಿ ಇಂದು ನಾವಿದ್ದೇವೆ. ಧಾವಂತದ ಬದುಕಿನಿಂದ ಅಕಾಲಿಕ ಮುಪ್ಪಿನಂಥ ಅಡ್ಡ ಪರಿಣಾಮಗಳೂ ಎದುರಾಗುತ್ತವೆ ಎಂದರು.

ಧಾವಂತದ ಬದುಕಿನ ದುಷ್ಪರಿಣಾಮವನ್ನು ಅರಿಯದೇ ನಾವು ಆ ಬದುಕಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಆಯಾ ಕಾರ್ಯಕ್ಕೆ ಅಗತ್ಯ ಸಮಯವನ್ನು ವಿನಿಯೋಗಿಸಿದಾಗ ಮಾತ್ರ ಸೂಕ್ತ ಫಲ ದೊರಕುತ್ತದೆ. ಸಮಾಧಾನವನ್ನು, ಅವಸರವಿಲ್ಲದ ಬದುಕನ್ನು ನಾವು ರೂಢಿಸಿಕೊಳ್ಳವೇಕು ಎಂದು ಸೂಚಿಸಿದರು.ಇಂದಿನ ಜೀವನದಲ್ಲಿ ವೇಗ ಕಡಿಮೆಯಾಗುವ ಸಾಧ್ಯತೆ ಕಡಿಮೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ತಾಳ್ಮೆ ವಹಿಸಿದಾಗ, ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ತಾಳ್ಮೆಯೊಂದು ಬದುಕಿನಲ್ಲಿ ದೊರಕಿದರೆ ಉಳಿದೆಲ್ಲವೂ ಸಿಗುತ್ತದೆ ಎಂದು ವಿಶ್ಲೇಷಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 02-05-2025 | ಕೆಲವು ಕಡೆ ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ 6ರಿಂದ ಹೆಚ್ಚಾಗುವ ನಿರೀಕ್ಷೆ|
May 2, 2025
2:14 PM
by: ಸಾಯಿಶೇಖರ್ ಕರಿಕಳ
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ | ಮೃತಪಟ್ಟ ಕುಟುಂಬಗಳಿಗೆ  ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ
May 2, 2025
7:13 AM
by: The Rural Mirror ಸುದ್ದಿಜಾಲ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆ ಸಾಧ್ಯತೆ
May 2, 2025
6:58 AM
by: The Rural Mirror ಸುದ್ದಿಜಾಲ
ಜೀವನ ಪೂರ್ತಿ ಈ ರಾಶಿಯವರ ಮೇಲಿರುವುದು ಗುರು ಬಲ !
May 2, 2025
6:39 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group