ತಪ್ಪು ಮಾಡದಿರುವುದು ಧೈರ್ಯದ ಮೂಲ: ರಾಘವೇಶ್ವರ ಶ್ರೀ

August 28, 2022
9:22 PM

ಆಧ್ಯಾತ್ಮಿಕ ಜೀವನ ಹಾಗೂ ಸಾಮಾನ್ಯ ಜೀವನಕ್ಕೆ ಧೈರ್ಯ ಅಥವಾ ಸ್ಥಿರಚಿತ್ತ ಅಗತ್ಯ. ತಪ್ಪು ಮಾಡದಿರುವುದು ಧೈರ್ಯದ ಮೂಲ. ತಪ್ಪು ಮಾಡುವವ ಸಹಜವಾಗಿಯೇ ಭಯಕ್ಕೆ ಶರಣಾಗುತ್ತಾನೆ. ತಪ್ಪು ಮಾಡದಿದ್ದರೆ ನಿಶ್ಚಿಂತೆಯಿಂದ, ಧೈರ್ಯದಿಂದ ಇರುತ್ತಾನೆ. ತಪ್ಪು ಮಾಡದಿರುವುದನ್ನು ರೂಢಿಸಿಕೊಂಡಲ್ಲಿ ಸಹಜವಾಗಿಯೇ ನಿಜವಾದ ಧೈರ್ಯ ನಮಗೆ ಬರುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ  ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಲಹೆ ಮಾಡಿದರು.

Advertisement
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಬದುಕಿನಲ್ಲಿ ಎಂಥ ವಿಘ್ನಗಳು ಬಂದರೂ ವಿಚಲಿತರಾಗದೇ ಧೈರ್ಯದಿಂದ ಎದುರಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಬದುಕಿನಲ್ಲಿ ಈ ಗುಣ ಎಲ್ಲೆಡೆ ಉಪಯೋಗಕ್ಕೆ ಬರುತ್ತದೆ. ಜೀವನ ಹಾಗೂ ಉಜ್ಜೀವನಕ್ಕೆ ಧೈರ್ಯ ಅನಿವಾರ್ಯ ಎಂದರು.
ಧೈರ್ಯ ಕಳೆದುಕೊಂಡು ಆ ಜಾಗದಲ್ಲಿ ಭಯ ಬಂದರೆ ಅದು ನಮ್ಮ ಅವಸಾನಕ್ಕೆ ಕಾರಣವಾಗುತ್ತದೆ. ಇಲ್ಲದ ಬಲವನ್ನು ತಂದುಕೊಡುವಂಥದ್ದು ಧೈರ್ಯ. ಆದರೆ ಇರುವ ಬಲವನ್ನು ಕುಗ್ಗಿಸುವಂಥದ್ದು ಭಯ ಎಂದು ಹೇಳಿದರು.

ಧೈರ್ಯ ಹಾಗೂ ಭಯ ಎಂಬ ಎರಡು ಭಾವಗಳು ನಮ್ಮೆಲ್ಲರ ಬದುಕಿನಲ್ಲಿ ಬರುತ್ತವೆ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಈ ಗುಣ ಎಲ್ಲೆಡೆ ಉಪಯೋಗಕ್ಕೆ ಬರುವಂಥದ್ದು. ಕರುಣೆ, ಪ್ರೀತಿ ಮತ್ತಿತರ ಭಾವಗಳನ್ನು ವಿವೇಚನಾಯುಕ್ತವಾಗಿ ಬಳಸಬೇಕು. ಆದರೆ ಧೈರ್ಯ ಎಲ್ಲೆಡೆ ಬಳಕೆಯಾಗುವಂಥದ್ದು ಎಂದು ವಿಶ್ಲೇಷಿಸಿದರು.

ಧೈರ್ಯ ಇಲ್ಲದಿದ್ದರೆ ಏನು ಇದ್ದರೂ ಪ್ರಯೋಜನವಿಲ್ಲ. ಸ್ಥಿರವಾದ ಚಿತ್ತೋನ್ನತಿ ಧೈರ್ಯದ ಲಕ್ಷಣ. ಮತ್ತೆ ಮತ್ತೆ ವಿಘ್ನಗಳು ಬಂದು ಅಪ್ಪಳಿಸಿದರೂ ವಿಚಲಿತವಾಗದೇ ಇರುವ ಗುಣ ಇದು. ರಾಮ ಹಿಮಾಲಯ ಪರ್ವತದಂತೆ ಧೈರ್ಯವಂತ ಎಂಬ ಉಲ್ಲೇಖ ಇದೆ. ಭೂಕಂಪ, ಚಂಡಮಾರುತ ಅಪ್ಪಳಿಸಿದರೂ ವಿಚಲಿತವಾಗದೇ ಇರುವಂಥದ್ದು ಎಂಬ ಅರ್ಥ ಎಂದು ವಿವರಿಸಿದರು.

ಮೂರು ಬಗೆಯ ಜನರು ಇರುತ್ತಾರೆ. ಕೆಲವರು ಮುಂದೆ ವಿಘ್ನ ಬಂದರೆ ಎಂಬ ಭಯದಿಂದ ಕಾರ್ಯವನ್ನು ಆರಂಭಿಸುವುದೇ ಇಲ್ಲ. ಇವರು ಅಧಮರು. ಇನ್ನೊಂದು ವರ್ಗ ಕಾರ್ಯ ಆರಂಭಿಸಿ ವಿಘ್ನ ಬಂದಾಗ ನಿಲ್ಲಿಸುತ್ತಾರೆ. ಇವರು ಮಧ್ಯಮವರ್ಗಕ್ಕೆ ಸೇರುತ್ತಾರೆ. ಆದರೆ ಇನ್ನೊಂದು ವರ್ಗ ಮತ್ತೆ ಮತ್ತೆ ವಿಘ್ನಗಳು ಬಂದು ಅಪ್ಪಳಿಸಿದರೂ ವಿಚಲಿತರಾಗದವರು. ಇವರು ಉತ್ತಮೋತ್ತಮರು. ಇಂಥ ಧೈರ್ಯವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಗೃಹಸಚಿವ ಆರಗ ಜ್ಞಾನೇಂದ್ರ , ಶಾಸಕ ದಿನಕರ ಶೆಟ್ಟಿಯವರು ಶ್ರೀಗಳ ಆಶೀರ್ವಾದ ಪಡೆದರು. ಗಾಣಿಗ ಸಮಾಜ, ಸಿದ್ದಿ ಸಮಾಜ ಮತ್ತು ದೇಶಭಂಡಾರಿ ಸಮಾಜಗಳ ವತಿಯಿಂದ ಭಾನುವಾರ ಪಾದಪೂಜೆ ನೆರವೇರಿತು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group