ನಿಮ್ಮ ನಿಯಂತ್ರಣದಲ್ಲಿದ್ದರೆ ಕ್ರೋಧವೂ ದೋಷವಲ್ಲ- ರಾಘವೇಶ್ವರ ಶ್ರೀ |

August 7, 2022
10:01 PM
Advertisement

ಕ್ರೋಧದ ನಿಯಂತ್ರಣದಲ್ಲಿ ನೀವಿದ್ದಾಗ ಕ್ರೋಧ ದೋಷ. ನಿಮ್ಮ ನಿಯಂತ್ರಣದಲ್ಲಿ ಕೋಪ ಇದ್ದಾಗ ಅದು ಗುಣ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿಶ್ಲೇಷಿಸಿದರು.

Advertisement

ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ಕೋಪ ಇರುವುದು ಆತ್ಮರಕ್ಷಣೆಗೆ; ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನು ಉಂಟು ಮಾಡಬಾರದು. ನಮ್ಮ ನಿಯಂತ್ರಣದಲ್ಲಿರುವ ಕೋಪ ಪ್ರತಿಯೊಬ್ಬರಿಗೂ ಬೇಕು ಎಂದು ಮಾರ್ಮಿಕವಾಗಿ ನುಡಿದರು.

Advertisement
Advertisement

ರಾಮ ಸ್ಥಾನಕ್ರೋಧ- ಜಿತಕ್ರೋಧ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಅಂದರೆ ರಾಮ ಕ್ರೋಧವನ್ನು ಗೆದ್ದವನು. ಕ್ರೋಧ ನಮ್ಮ ವಶದಲ್ಲಿರಬೇಕು. ಆದ್ದರಿಂದ ಕ್ರೋಧವನ್ನು ಹತ್ತಿಕ್ಕುವುದು ಸಮಸ್ಯೆಗೆ ಪರಿಹಾರವಲ್ಲ. ಕ್ರೋಧವನ್ನು ನಮ್ಮ ನಿಯಂತ್ರಣದಲ್ಲಿದ್ದರೆ ಅದು ದೋಷವಲ್ಲ; ಗುಣ ಎಂದು ವಿಶ್ಲೇಷಿಸಿದರು. ಯಾರ ಬಗ್ಗೆ, ಯಾವಾಗ ಸಿಟ್ಟು ಮಾಡಬೇಕು ಎಂಬ ವಿವೇಚನೆ ಬೇಕು. ಅಗತ್ಯ ಬಿದ್ದಾಗ ಮಾತ್ರವೇ ಸಿಟ್ಟು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಉಕ್ಕಿಬರುವ ಕೋಪವನ್ನು ಯಾರು ನಿಗ್ರಹಿಸುತ್ತಾರೆಯೋ, ಕೋಪವೆಂಬ ಬೆಂಕಿಗೆ ತಾಳ್ಮೆಯ ನೀರನ್ನು ಯಾರು ಸುರಿಸುತ್ತಾರೆಯೋ ಅವರು ನಿಜವಾದ ಪುಣ್ಯಾತ್ಮರು ಎಂದು ಹನುಮಂತ ವಿವರಿಸಿದ್ದಾನೆ. ಸಿಟ್ಟು ಬಂದಾಗ ಎಂಥ ಕಾರ್ಯವನ್ನೂ ಮಾಡುತ್ತಾನೆ. ಸಿಟ್ಟಿಗಿಂತ ಕ್ಷಮೆ ದೊಡ್ಡದು ಎಂದು ಆಂಜನೇಯ ಬಣ್ಣಿಸಿದ್ದಾನೆ. ಹಾವು ಪೊರೆ ಕಳಚಿಕೊಳ್ಳುವಂತೆ ನಾವು ಸಿಟ್ಟನ್ನು ಬಿಡಬೇಕು ಎಂದು ಸಲಹೆ ಮಾಡಿದರು.

Advertisement
ಮಹಾಪುರುಷರೂ ಕ್ರೋಧಕ್ಕೆ ಒಳಗಾದ ನಿದರ್ಶನಗಳಿವೆ ಎಂದು ರಾಮಾಯಣದಲ್ಲಿ ರಾಮ ಕೋಪಗೊಂಡ ಸಂದರ್ಭಗಳನ್ನು ವಿವರಿಸಿದರು. ಖರ, ದೂಷಣರ ಸಂಹಾರದಲ್ಲಿ ರಾಮ ರಣಪಂಡಿತನಾದ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಸುತ್ತಮುತ್ತಲಿದ್ದ ರಕ್ಕಸ ಸೇನೆಯನ್ನು ಕಂಡು ರಾಕ್ಷಸ ಸಂಹಾರಕ್ಕಾಗಿ ಕ್ರೋಧವನ್ನು ಆವಾಹನೆ ಮಾಡಿಕೊಂಡ. ಕ್ರುದ್ಧನಾದ ರಾಮನನ್ನು ನೋಡಿದರೂ ಭಯವಾಗುವಂಥ ಭಯಂಕರ ರೂಪ ತಳೆದ ಎಂದು ವಿವರಿಸಿದರು.

ಅಂತೆಯೇ ಸಮುದ್ರ ರಾಜ ದಾರಿ ಕೊಡದಿದ್ದಾಗ ಅಂಥ ಭಯಂಕರ ಕೋಪ ರಾಮನಲ್ಲಿ ಕಂಡುಬಂದಿತ್ತು. ಸಮುದ್ರದ ಮೇಲೆ ಮೊದಲು ಯುದ್ಧ ಮಾಡಿ ನಂತರ ರಾವಣನನ್ನು ಎದುರಿಸೋಣ ಎಂದು ಲಕ್ಷ್ಮಣದಲ್ಲಿ ಹೇಳಿದ್ದ. ಸಮುದ್ರವನ್ನು ನಾಳೆ ದೂಳಾಗಿ ಮಾಡುತ್ತೇನೆ ಎಂದು ಘರ್ಜಿಸಿದ್ದ. ಅಂತೆಯೇ ರಾಮ- ರಾವಣರ ಯುದ್ಧದ ಕೊನೆಯ ಹಂತದಲ್ಲೂ ಕಣ್ಣಿನಿಂದ ರಾವಣನನ್ನು ಸುಟ್ಟು ಬಿಡುವಂತೆ ರಾಮ ನೋಡಿದ. ಅಂಥ ಕ್ರೋಧ ರಾಮನದ್ದಾಗಿತ್ತು ಎಂದು ವರ್ಣಿಸಿದರು.

Advertisement
ಅಖಿಲ ಭಾರತ ಹವ್ಯಕ ಮಹಾಸಭಾ ವತಿಯಿಂದ ಶ್ರೀ ಗುರುಭಿಕ್ಷಾ ಸೇವೆ ನಡೆಯಿತು. ಮುಕ್ರಿ ಸಮಾಜದ ವತಿಯಿಂದ ಪಾದಪೂಜೆ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಸಿಪಿಐ ಆರ್.ಎನ್.ಮುಕ್ರಿಯವರು ಶ್ರೀಗಳಿಂದ ಆಶೀರ್ವಾದ ಪಡೆದರು. ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಐದು ಮಂದಿ ವಿದ್ಯಾರ್ಥಿಗಳಿಗೆ ಅವರಷ್ಟೇ ಎತ್ತರದ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಮಂಜುನಾಥ ಸುವರ್ಣಗದ್ದೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ನಡೆಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೋಪಾಲ್‌ ಅನಿಲ ದುರಂತ : 39 ವರ್ಷ ಕಳೆದರು ಇನ್ನೂ ಮಾಸಿಲ್ಲ ನೆನಪು : ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ
December 3, 2023
12:36 PM
by: The Rural Mirror ಸುದ್ದಿಜಾಲ
ಅಗೋಚರ ಶಕ್ತಿ ಇದೆಯಾ..? ಅಥವಾ ಇಲ್ಲವಾ..? ಹಾಗಾದರೆ ಆ ಮಗುವನ್ನು ಕಾಪಾಡಿದ್ದು ಏನು..? ಸಮಯ ಪ್ರಜ್ಞೆಯಾ..?
December 3, 2023
12:20 PM
by: The Rural Mirror ಸುದ್ದಿಜಾಲ
ಸುನಾಮಿ ಭೀತಿಗೆ ನಲುಗಿದ್ದ ಫಿಲಿಪಿನ್ಸ್‌ನಲ್ಲಿ ಭಯೋತ್ಪಾದಕರ ದಾಳಿ : ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಘಟನೆ
December 3, 2023
12:07 PM
by: The Rural Mirror ಸುದ್ದಿಜಾಲ
ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ರಕ್ಷಣೆ : ಚಳಿಗಾಲದ ಪರಿಣಾಮ ಏನು? : ಅದರ ಉಪಚಾರಗಳೇನು..?
December 3, 2023
11:41 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror