ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ : ರಾಘವೇಶ್ವರ ಶ್ರೀ

August 11, 2022
7:15 PM

ದೇವರು, ಗುರು, ತಂದೆ- ತಾಯಿಯ ಕಾರುಣ್ಯ ನಮ್ಮ ಜೀವನಕ್ಕೆ ಆಧಾರ. ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

Advertisement
Advertisement
Advertisement
Advertisement

ಗೋಕರ್ಣದ  ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಆಶೀರ್ವಚನ ನೀಡಿದ ಅವರು, ಬಾಲ್ಯದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವಾಗ ತಂದೆ ತಾಯಿಯ ಕರುಣೆ ನಮ್ಮನ್ನು ಬೆಳೆಸುತ್ತದೆ. ಅಂತೆಯೇ ಗುರು ನೀಡಿದ ಜ್ಞಾನದ ಬೆಳಕು ಇಡೀ ಬದುಕಿನಲ್ಲಿ ನಮಗೆ ದಾರಿದೀಪ. ವಿದ್ಯೆಯಿಂದ ಬರುವ ಜ್ಞಾನ ನಮ್ಮ ಇಡೀ ಬದುಕಿಗೆ ದಾರಿದೀಪ. ಆದರೆ ಅನ್ನ- ಆಹಾರದಿಂದ ನಮಗೆ ಸಿಗುವ ತೃಪ್ತಿ ಕ್ಷಣಿಕ ಎಂದು ಅಭಿಪ್ರಾಯಪಟ್ಟರು.

Advertisement
ಬದುಕಿಗೆ ಕರುಣೆಯೇ ನಮ್ಮ ಬದುಕಿಗೆ ಆಧಾರ. ಈಶ್ವರನ ಕರುಣೆಯಿಂದಲೇ ನಾವೆಲ್ಲರೂ ಇದ್ದೇವೆ. “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ” ಎಂದು ದೇವರ ದಾಸಿಮಯ್ಯ ವಚನದಲ್ಲಿ ಬಣ್ಣಿಸಿದ್ದಾನೆ. ಈ ವಚನದ ಹಿಂದಿರುವುದು ದೇವರ ಕಾರುಣ್ಯದ ಬಣ್ಣನೆ ಎಂದರು.

ಗುರು, ದೇವರು, ತಾಯಿ- ತಂದೆಯ ಕರುಣೆಯ ಋಣವನ್ನು ನಾವ್ಯಾರೂ ತೀರಿಸಲಾಗದು; ನಾವು ಬದುಕಿನಲ್ಲಿ ತಪ್ಪು ಮಾಡಿದ ಬಳಿಕವಂತೂ ಕರುಣೆಯಿಂದಲೇ ಬದುಕುತ್ತೇವೆ. ಜೀವನದಲ್ಲಿ ತಪ್ಪು ಮಾಡದವನು ಯಾರೂ ಇಲ್ಲ; ತಪ್ಪು ಮಾಡದವರು ಇಲ್ಲಿಗೆ ಬರುವುದೇ ಇಲ್ಲ; ಪಾಪ- ಪುಣ್ಯ ಮಾಡಿದವರು ಮಾಡಿದವರು ಮಾತ್ರ ಮನುಷ್ಯ ಜನ್ಮ ಪಡೆಯುತ್ತಾರೆ. ಆದ್ದರಿಂದ ಎಲ್ಲರ ಬದುಕಿಗೂ ಕರುಣೆ ಆಧಾರ ಎಂದು ವಿಶ್ಲೇಷಿಸಿದರು.

Advertisement
ಎಲ್ಲ ಜೀವಗಳಲ್ಲಿ ದೇವರೇ ಇರುತ್ತಾನೆ ಎಂಬ ಭಾವವೊಂದಿದ್ದರೆ ನಾವು ಯಾರಿಗೂ ನೋವು ಮಾಡುವುದಿಲ್ಲ. ಯಾರನ್ನೇ ನೋಯಿಸಿದರೂ ನಾವು ದೇವರನ್ನು ನೋಯಿಸಿದಂತಾಗುತ್ತದೆ. ನಮಗೆ ಹೇಗೆ ನಮಗೆ ಇಷ್ಟವೋ ಎಲ್ಲ ಜೀವವೂ ಹಾಗೆಯೇ ಎಂಬ ಭಾವ ಇದ್ದರೆ ಸರ್ವತ್ರವೂ ದಯಾಭಾವ ಮೂಡುತ್ತದೆ ಎಂದು ಬಣ್ಣಿಸಿದರು.

ಹೊನ್ನಾವರದ ವಾಗ್ದೇವಿ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ ನೆರವೇರಿಸಲಾಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror