Advertisement
ಸುದ್ದಿಗಳು

ಗೋಕರ್ಣದ ಅಶೋಕೆಯಲ್ಲಿ ಗುರುಕುಲ ಚಾತುರ್ಮಾಸ್ಯ ಆರಂಭ | ಭಾರತದ ಜ್ಞಾನಪರಂಪರೆ ವಿಶ್ವಕ್ಕೆ ಬೆಳಕಾಗಲಿ | ರಾಘವೇಶ್ವರ ಶ್ರೀ

Share

ಸಮಸ್ತ ಸಮಾಜಕ್ಕೆ ಸುಜ್ಞಾನದ ಬೆಳಕನ್ನು ಹರಿಸಿದ ಗುರುಪರಂಪರೆಯ ಪೂಜೆಯೇ ಗುರುಪೂರ್ಣಿಮೆಯ ವಿಶೇಷ. ಭಾರತದ ಜ್ಞಾನಪರಂಪರೆ ವಿಶ್ವಕ್ಕೆ ಬೆಳಕಾಗಬೇಕು ಎಂಬ ಮಹತ್ಸಂಕಲ್ಪದೊಂದಿಗೆ ಈ ಬಾರಿಯ ಚಾತುರ್ಮಾಸ್ಯವನ್ನು ಗುರುಕುಲ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

Advertisement
Advertisement
Advertisement
ಗುರುಕುಲ ಚಾತುರ್ಮಾಸ್ಯ ಆರಂಭದ ದಿನ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದ ಪೂಜ್ಯರು, “ಗುರುಪೂರ್ಣಿಮೆ ಎನ್ನುವುದು ಜ್ಞಾನಚೈತನ್ಯದ ಪೂಜೆ. ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲ ಉದ್ದೇಶವೂ ಸುಜ್ಞಾನ ಪ್ರಸಾರ. ವಿಶ್ವವಿದ್ಯಾಪೀಠ ಕಟ್ಟಲು ಸಮಸ್ತ ಸಮಾಜವನ್ನು ತೊಡಗಿಸುವುದೇ ಗುರುಕುಲ ಚಾತುರ್ಮಾಸ್ಯದ ಸಂಕಲ್ಪ” ಎಂದರು. ಈ ಚಾತುರ್ಮಾಸ್ಯ ವಿವಿವಿಗೆ ಭೀಮಶಕ್ತಿಯನ್ನು, ರಾಮಶಕ್ತಿಯನ್ನು ನೀಡಲಿ. ತಾನು ಬೆಳಗಿ, ದೇಶವನ್ನು ಬೆಳಗಿ, ವಿಶ್ವವನ್ನು ಬೆಳಗುವಂತಾಗಲಿ ಎಂದು ಆಶಿಸಿದರು.
Advertisement
ಗುರುಪೂರ್ಣಿಮೆಯಂದು ನಡೆಯುವುದು ಸುಜ್ಞಾನದ ಪೂಜೆ. ಜ್ಞಾನ ಪ್ರಪಂಚಕ್ಕೆ ಪ್ರಸಾರವಾದದ್ದು ಇಂಥ ಗುರುಗಳ ಮೂಲಕ. ಇಂದು ನಡೆದಿರುವುದು ಜ್ಞಾನಚೈತನ್ಯದ ಪೂಜೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನಿಸಿದ ಜ್ಞಾನವನ್ನು ನೀಡುವುದೇ ವಿವಿವಿ ಗುರಿ. ಜೀವನ ತತ್ವದ ಜ್ಞಾನವನ್ನು ವಿಶ್ವಕ್ಕೆ ಪರಿಚಯಿಸುವುದು ಉದ್ದೇಶ. ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವುದು, ರಾಷ್ಟ್ರಕ್ಕೆ ಒಳ್ಳೆಯ ಆಸ್ತಿಗಳನ್ನು ಸೃಷ್ಟಿಸುವುದು ನಮ್ಮ ಸಂಕಲ್ಪ ಎಂದು ವಿವರಿಸಿದರು.
ಗುರು ಇದ್ದರೆ ಬದುಕು ಪೂರ್ಣಿಮೆ; ಇಲ್ಲದಿದ್ದರೆ ಬದುಕು ಅಮಾವಾಸ್ಯೆ. ಹುಣ್ಣಿಮೆಯ ಬೆಳಕು ನಮ್ಮನ್ನು ತಂಪುಗೊಳಿಸುವಂಥದ್ದು. ಗುರು, ಕೋಟಿ ಸೂರ್ಯರ ಪ್ರಕಾಶ, ಕೋಟಿ ಚಂದ್ರರ ತಂಪು. ಬದುಕಿಗೆ ಬೆಳಕು ಮತ್ತು ತಂಪು ಎರಡನ್ನೂ ನೀಡುವಂಥವನು ಗುರು.ಭೋಗದ ಮಧ್ಯೆ ಯೋಗಿಯಾಗಿ ಹೇಗೆ ಇರಬಹುದು ಎನ್ನುವುದನ್ನು ಬದುಕಿ ತೋರಿಸಿ, ಯುದ್ಧದ ನಡುವೆ ಶಾಂತಿಯ ವೇದಾಂತ, ತತ್ವೋಪದೇಶ ಮಾಡಿದವನು ಕೃಷ್ಣ. ಗೀತೆಯ ಸಾರ ವಿಶ್ವದ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಜಗತ್ತಿಗೆ ಬೆಳಕಾದ ಭಗವದ್ಗೀತೆಯನ್ನು ನೀಡಿದ ಕೃಷ್ಣ ಜಗದ್ಗುರುವಾಗಿರುವುದರಿಂದಲೇ ಗುರುಪೂರ್ಣಿಮೆಯಂದು ವಿಶ್ವವಂದ್ಯನಾದ ಕೃಷ್ಣನನ್ನೂ ವಿಶೇಷವಾಗಿ ಪೂಜಿಸಲಾಗುತ್ತದೆ ಎಂದು ವಿವರಿಸಿದರು.
Advertisement

ಚಾತುರ್ಮಾಸ್ಯ ಸೇವಾ ಸಮಿತಿಯ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಸಂಕಲ್ಪ ಟ್ರಸ್ಟ್ ನ ಪ್ರಮೋದ್ ಹೆಗಡೆ, ಡಾ.ಗಜಾನನ ಶರ್ಮ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ವೇದಿಕೆಯಲ್ಲಿದ್ದರು.

ಡಾ.ಕಜೆಯವರ ಆಯುರ್ವೇದದ ಜ್ಞಾನಯಾನ ಮಾಲಿಕೆಯ ಮೊದಲ ಪುಸ್ತಕವಾದ ‘ಪೌಷ್ಟಿಕ’ ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಚಾತುರ್ಮಾಸ್ಯ ಮಹತ್ವದ ಬಗ್ಗೆ ವಿದ್ವಾನ್ ಸತ್ಯನಾರಾಯಣ ಶರ್ಮ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ದಂಪತಿ ಸಭಾಪೂಜೆ ನೆರವೇರಿಸಿದರು. ಮೋಹನ್ ಭಾಸ್ಕರ ಹೆಗಡೆ ಸ್ವಾಗತಿಸಿದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Advertisement
ಸಂತೋಷ ಹೆಗಡೆಯವರನ್ನು ಶ್ರೀಮಠದ ಸಿಓಓ ಆಗಿ ನೇಮಕ ಮಾಡಿ, ಶ್ರೀಗಳು ಆಶೀರ್ವದಿಸಿದರು. ದಿನೇಶ ಹೆಗಡೆಯವರನ್ನು ಶ್ರೀಸಂಸ್ಥಾನದ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ವಿವಿವಿ ಕೇಂದ್ರೀಯ ಸಮಿತಿ ಅಧ್ಯಕ್ಷರಾಗಿ, ಲೋಕಸಂಪರ್ಕಾಧಿಕಾರಿಯಾಗಿ ಹರಿಪ್ರಸಾದ್ ಪೆರಿಯಾಪು ಅವರನ್ನು ನೇಮಕ ಮಾಡಲಾಯಿತು.
ಶ್ರೀಮಠದ ಮಾತೃವಿಭಾಗದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್, ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಸೇವಾ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಪದಾಧಿಕಾರಿಗಳಾದ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಹೆಗಡೆ, ಮೂರೂರು ಸುಬ್ರಾಯ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ್, ಗ್ರಾಮಪಂಚಾಯ್ತಿ ಅಧ್ಯಕ್ಷ ವೆಂಕಟೇಶ ಜನ್ನ, ಎನ್.ಎಸ್.ಹೆಗಡೆ ಕರ್ಕಿ, ಉಮೇಶ್ ನಾಯ್ಕ್, ಭಾಸ್ಕರ್ ನಾರ್ವೇಕರ್, ವೆಂಕಟರಮಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 hours ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

12 hours ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

1 day ago

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…

2 days ago

ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…

2 days ago

ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?

ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…

2 days ago