ತಾಳ್ಮೆ, ಸಹನೆಯಿಂದ ಅದ್ಭುತ ಸಾಧನೆ ಸಾಧ್ಯ: ರಾಘವೇಶ್ವರ ಶ್ರೀ

July 23, 2022
11:15 AM
ಮನು ಸ್ಮೃತಿಯಲ್ಲಿ ಉಲ್ಲೇಖಿಸಿದ ಹತ್ತು ಗುಣಗಳಲ್ಲಿ ಸಹನೆ, ಕ್ಷಮೆ, ತಾಳ್ಮೆ ಪ್ರಮುಖವಾದದ್ದು; ನಮ್ಮ ಜೀವನದ ಪ್ರತಿ ಹಂತದಲ್ಲಿ ಇದು ಅಗತ್ಯ. ತಾಳ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದ್ಭುತಗಳನ್ನು ಸಾಧಿಸಬಹುದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಹತ್ತನೇ ದಿನವಾದ ಶುಕ್ರವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, “ಸಹನೆಗೆ ಹೆಚ್ಚಿನ ಬಲ ಬೇಕು. ಅದ್ಭುತ ಮನೋಬಲವೂ ಬೇಕು. ಇಂಥ ಸಹನೆಯನ್ನು ನಾವು ರಾಮನಿಂದ ಪಡೆದುಕೊಳ್ಳಬೇಕು. ಕಷ್ಟ ಸಹಿಸುವ ಶಕ್ತಿ ಸಹನೆಯಿಂದ ಬರುತ್ತದೆ. ಸಹನೆ ತಪ್ಪಿದರೆ ಕೈಗೆ ಬಂದ ಭಾಗ್ಯವೂ ದಕ್ಕುವುದಿಲ್ಲ” ಎಂದು ವಿಶ್ಲೇಷಿಸಿದರು.
ಸಹನೆ ಕಳೆದುಕೊಂಡರೆ ನಮ್ಮ ಅರ್ಹ ಅಭ್ಯುದಯ ಕೈ ತಪ್ಪುತ್ತದೆ ಮಾತ್ರವಲ್ಲದೇ ಇದು ಅನಾಹುತಕ್ಕೂ ದಾರಿಯಾಗುತ್ತದೆ. ಸಹನೆ ತಪ್ಪಿದಲ್ಲಿ ದುಡುಕಿನಿಂದ ಅವಿವೇಕ ಉಂಟಾಗುತ್ತದೆ. ಇದು ಎಲ್ಲ ಆಪತ್ತುಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ತಾಳಿದವನು ಬಾಳಿಯಾನು ಎಂಬ ನಾಣ್ನುಡಿ ಹುಟ್ಟಿಕೊಂಡಿದೆ. ಮಾತನಾಡುವ ಮೊದಲು, ಹೆಜ್ಜೆ ಇಡುವ ಮೊದಲು ಸಮಾಧಾನ, ಸಮಾಲೋಚನೆ ಇದ್ದರೆ ಬದುಕು ಶ್ರೇಷ್ಠವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಂಪೆಕಟ್ಟೆ ಮಂಡಲದ ಶಿಷ್ಯಭಕ್ತರ ವತಿಯಿಂದ ಶುಕ್ರವಾರ ಶ್ರೀಗುರುಭಿಕ್ಷೆ ನೆರವೇರಿತು. ಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ನವಚಂಡೀಯಾಗ ನಡೆಯಿತು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror