ವಯನಾಡ್‌ ಕ್ಷೇತ್ರ ಬಿಟ್ಟುಕೊಟ್ಟ ರಾಹುಲ್‌ ಗಾಂಧಿ | ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ | ಬಿಜೆಪಿಯಿಂದ ಸ್ಮೃತಿ ಇರಾನಿ ಸ್ಪರ್ಧೆ ಸಾಧ್ಯತೆ |

June 18, 2024
1:22 PM

ಲೋಕಸಭೆ ಚುನಾವಣೆ(Lok sabha Election) ಮುಗಿದರು ಇನ್ನು ಹವಾ ನಿಂತಿಲ್ಲ. ಇದೀಗ ಕಾಂಗ್ರೆಸ್‌(Congress) ನಾಯಕ ರಾಹುಲ್‌ ಗಾಂಧಿ(Rahul Gandhi) ಎರಡು ಕ್ಷೇತ್ರದಲ್ಲಿ ಗೆದ್ದು ಬೀಗಿದ್ದರು. ಈಗ ಒಂದು ಕ್ಷೇತ್ರವನ್ನು ಆರಿಕೊಂಡ ಪರಿಣಾಮ ರಾಯ್‌ ಬರೇಲಿಯನ್ನು(Ray Bareli) ಇಟ್ಟುಕೊಂಡು ವಯನಾಡು ಅನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಅವರು ರಾಯ್ ಬರೇಲಿಯ ಸಂಸದರಾಗಿ ಉಳಿಯಲಿದ್ದಾರೆ. ವಯನಾಡ್‌ನಿಂದ ಉಪಚುನಾವಣೆಯಲ್ಲಿ (Wayanad Lok Sabha Election) ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದರೊಂದಿಗೆ ಗಾಂಧಿ ಕುಟುಂಬದ ಮತ್ತೊಬ್ಬರು ದಕ್ಷಿಣದಿಂದ ಚುನಾವಣಾ ರಾಜಕೀಯಕ್ಕೆ ಬರಲಿದ್ದಾರೆ.

Advertisement

ಗಾಂಧಿ ಕುಟುಂಬವು ದಕ್ಷಿಣ ಭಾರತದೊಂದಿಗೆ ಹಳೆಯ ಸಂಬಂಧವನ್ನು ಹೊಂದಿದೆ. ಇಂದಿರಾ ಗಾಂಧಿಯವರು 1978ರ ಉಪಚುನಾವಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಪ್ರಧಾನಿಯಾಗಿದ್ದರು. ಇದಾದ ನಂತರ ಇಂದಿರಾ ಗಾಂಧಿ ಅವರು 1980ರಲ್ಲಿ ಆಂಧ್ರದ ಮೇದಕ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದರು. 1999ರಲ್ಲಿ ಸೋನಿಯಾ ಗಾಂಧಿ ಅವರು ಕೂಡ ದಕ್ಷಿಣ ಭಾರತದಿಂದ ರಾಜಕೀಯ ಜೀವನ ಆರಂಭಿಸಿದರು. ಅವರು 1999ರಲ್ಲಿ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಮತ್ತು ಎರಡೂ ಸ್ಥಾನಗಳನ್ನು ಗೆದ್ದಿದ್ದರು. ಆದರೆ, ಬಳಿಕ ಅವರು ಬಳ್ಳಾರಿ ಸೀಟು ತೊರೆದಿದ್ದರು.

1999ರಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್‌ ಸ್ಪರ್ಧೆ! : ಬಿಜೆಪಿ ಟಿಕೆಟ್‌ ನೀಡುವ ವಿಚಾರದಲ್ಲಿ ಹಿಂದಿನಿಂದಲೂ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಕಣಕ್ಕಿಳಿಯುವ ಸುದ್ದಿ ಬಹಿರಂಗವಾದಾಗ ಬಿಜೆಪಿ ಈ ಕ್ಷೇತ್ರದಿಂದ ಸುಷ್ಮಾ ಸ್ವರಾಜ್‌ಗೆ ಟಿಕೆಟ್ ನೀಡುವ ಮೂಲಕ ಚುನಾವಣಾ ಸ್ಪರ್ಧೆಯನ್ನು ಕುತೂಹಲಕರಗೊಳಿಸಿತ್ತು. ಈ ಸೀಟಿನಲ್ಲಿ ಸೋನಿಯಾ ಗಾಂಧಿಗೆ ಸುಷ್ಮಾ ತೀವ್ರ ಪೈಪೋಟಿ ನೀಡಿದ್ದರು. ಆದರೆ, ಈ ಚುನಾವಣೆಯಲ್ಲಿ ಸೋತರು. ಸೋನಿಯಾ ಗಾಂಧಿ 414000 ಮತಗಳನ್ನು ಪಡೆದರು. ಆದರೆ ಸುಷ್ಮಾ ಸ್ವರಾಜ್ ಅವರು ಮೂರೂವರೆ ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಸೋನಿಯಾ ಗಾಂಧಿ ಅವರು ಈ ಚುನಾವಣೆಯಲ್ಲಿ ಸುಮಾರು 56000 ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು.

ಸದ್ಯ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವುಗೊಂಡಿರುವ ವಯನಾಡ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕುತೂಹಲ ಕೆರಳಿಸಿದ್ದು, ಪ್ರಿಯಾಂಕ ಗಾಂಧಿಯನ್ನು ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಬಿಜೆಪಿ ಸ್ಮೃತಿ ಇರಾನಿಯನ್ನು ಕಣಕ್ಕಿಳಿಸಿ ಸ್ಪರ್ಧೆಯನ್ನು ರೋಚಕಗೊಳಿಸುತ್ತಾ ಅಥವಾ ತ್ರಿಶ್ಯೂರ್‌ನಲ್ಲಿ ಸೋತಿರುವ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಣಂತೆ ಬೇರೆ ಅಭ್ಯರ್ಥಿಯನ್ನು ಹಾಕುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |
April 4, 2025
4:45 PM
by: The Rural Mirror ಸುದ್ದಿಜಾಲ
ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group