ಸೆಂಟರ್ ಫಾರ್ ರೈಲ್ವೇ ಇನ್ಫರ್ಮೇಷನ್ ಸಿಸ್ಟಮ್- CRIS ನ ಸಂಸ್ಥಾಪನಾ ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲು ಪ್ರಯಾಣಿಕರಿಗೆ ಒಂದೇ ಕಡೆಯಲ್ಲಿ ಎಲ್ಲಾ ಸೌಲಭ್ಯ ಒದಗಿಸುವ Rail One App ಅನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಿಡುಗಡೆ ಮಾಡಿದರು. ಈ APP ಮೂಲಕ ರೈಲಿನ ಟಿಕೆಟ್ ಬುಕಿಂಗ್, ರೈಲುಗಳ ವಿಚಾರಣೆ, PNR, ಪ್ರಯಾಣ ಯೋಜನೆ ಮತ್ತು ರೈಲಿನಲ್ಲಿ ಆಹಾರದಂತಹ ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಈ ವೇಳೆ ಅಶ್ವಿನಿ ವೈಷ್ಣವ್, App ಎಲ್ಲಾ ಸೇವೆಗಳನ್ನು ಒಂದೇ ಸ್ಥಳದಲ್ಲಿ ನೀಡುವ ಜೊತೆಗೆ ಬಳಕೆದಾರರಿಗೆ ಭಾರತೀಯ ರೈಲ್ವೆ ಸೇವೆಗಳ ಸಂಪೂರ್ಣ ಪ್ಯಾಕೇಜ್ ನೀಡಲಿದೆ. ಸಿಂಗಲ್-ಸೈನ್-ಆನ್ ಸೌಲಭ್ಯವು ಈ ಆ್ಯಪ್‌ನ ವಿಶಿಷ್ಟ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದು ಬಳಕೆದಾರರು ಹಲವಾರು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದರು. ಈ App ಅನ್ನು ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು IOS ಆಪ್ ಸ್ಟೋರ್ ಎರಡರಿಂದಲೂ ಡೌನ್‌ಲೋಡ್ ಮಾಡಬಹುದು ಎಂದು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel