ಭಾರತೀಯ ರೈಲ್ವೇಯನ್ನು ಆಧುನಿಕ, ಸುರಕ್ಷಿತ ಮತ್ತು ಅನುಕೂಲಕರವಾಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದ ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ಉದ್ಘಾಟಿಸಿದರು. ಅವರು ಮುಂಬೈ ಉಪನಗರ ರೈಲ್ವೆಯ ಎರಡು ಉಪನಗರ ರೈಲುಗಳಿಗೆ ಪ್ಲ್ಯಾಗ್ ಆಫ್ ಮಾಡಿದರು.
ರೈಲ್ವೆಯನ್ನು ಆಧುನಿಕ ಸುರಕ್ಷಿತ ಮತ್ತು ಅನುಕೂಲಕರವಾಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕೋವಿಡ್ ಕೂಡ ಈ ಕಾರಣಕ್ಕಾಗಿ ನಮ್ಮ ಬದ್ಧತೆಯಿಂದ ನಮ್ಮನ್ನು ವಿಮುಖಗೊಳಿಸಲಿಲ್ಲ. ಈ ಯೋಜನೆಯು ಮುಂಬೈನ ಸಾಮರ್ಥ್ಯವನ್ನು ಮತ್ತು ಕನಸಿನ ನಗರ ಎಂಬ ಗುರುತನ್ನು ಬಲಪಡಿಸುತ್ತದೆ. ಮಾತ್ರವ್ಲ ಇಂದು 6,000 ಕ್ಕೂ ಹೆಚ್ಚು ರೈಲು ನಿಲ್ದಾಣಗಳು ವೈ-ಫೈ ಸೌಲಭ್ಯದೊಂದಿಗೆ ಸಂಪರ್ಕ ಹೊಂದಿದೆ. ವಂದೇ ಭಾರತ್ ರೈಲುಗಳು ವೇಗ ಮತ್ತು ಆಧುನಿಕ ಸೌಕರ್ಯವನ್ನು ನೀಡುತ್ತಿದೆ. ಮುಂಬರುವ ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳು ದೇಶಕ್ಕೆ ಸೇವೆ ಸಲ್ಲಿಸಲು ಪ್ರಾರಂಭಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.