ಕೇರಳದ ನಿಲಂಬೂರಿನಿಂದ ನಂಜನಗೂಡಿಗೆ ರೈಲ್ವೆ ಯೋಜನೆ | ಬಂಡೀಪುರ ಬಲಿ ಪಡೆಯಲು ಸಜ್ಜಾದ ಸರ್ಕಾರಗಳು : ಸ್ಥಳೀಯರಿಂದ #SaveBandipur ಅಭಿಯಾನ

February 2, 2024
11:28 AM

ಅನೇಕ ಸಂದರ್ಭಗಳಲ್ಲಿ ನೆಲ, ಜಲ, ನಾಡು, ನುಡಿ ಅಂದಾಗ ಸರ್ಕಾರಗಳು(Govt) ಮಾರುದ್ದ ನಿಲ್ಲುವುದನ್ನೇ ನಾವು ಕಾಣ್ತೀವಿ. ಅಂಥ ಉದಾಹರಣೆಗಳು ಬೇಕಾದಷ್ಟಿವೆ. ಅದರಲ್ಲೂ ಆಧುನೀಕರಣಕ್ಕೆ(Modernization) ನಮ್ಮ ಭೂಮಿ(Land), ಪರಿಸರ(Nature) ನಾಶ ಆಗಿದ್ದೇ ಹೆಚ್ಚು. ಇದಕ್ಕೇ ಎಂದೂ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು ನಾವು ಕಾಣಲಿಲ್ಲ. ಈಗ ಕೇರಳದ(Kerala) ನಿಲಂಬೂರಿನಿಂದ ಕರ್ನಾಟಕದ(Karnataka) ನಂಜನಗೂಡಿಗೆ (Nilambur-Nanjangud) ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ವೈಜ್ಞಾನಿಕ ಸಮೀಕ್ಷೆ ಶುರುವಾಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಬಂಡೀಪುರ (Save Bandipur) ಕ್ಯಾಂಪೇನ್ ಶುರುವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಈ ಯೋಜನೆಗೆ ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಹಳೆ ಮೈಸೂರು ಭಾಗಕ್ಕೆ ಬಂಡೀಪುರ ಮತ್ತು ನಾಗರಹೊಳೆ ಕಾಡುಗಳು 2 ಕಣ್ಣುಗಳಿದ್ದಂತೆ. ಅಭಿವೃದ್ಧಿ ಹೆಸರಲ್ಲಿ ನಮ್ಮ ಕಾಡನ್ನು ನಾಶಪಡಿಸುವ ಎಲ್ಲಾ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕ ಸರ್ಕಾರ ರೈಲು ಸಮೀಕ್ಷೆಗೆ ಅವಕಾಶ ನೀಡಬಾರದು. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ಮುಂದುವರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

  • ಅಂತರ್ಜಾಲ ಮಾಹಿತಿ

The scientific survey has started for the railway project connecting Nilambur in Kerala to Nanjangud in Karnataka. After this, the Save Bandipur campaign has started on social media.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು
September 11, 2026
10:42 AM
by: ದ ರೂರಲ್ ಮಿರರ್.ಕಾಂ
ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror