ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಸದ್ಯ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದರೆ ಕೇರಳದ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ (24 ಗಂಟೆಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚು), ಕರಾವಳಿ ಕರ್ನಾಟಕದಲ್ಲೂ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ರೆಡ್ ಅಲರ್ಟ್‌ನಲ್ಲಿದ್ದರೆ, ಇತರ ಎಂಟು ಜಿಲ್ಲೆಗಳಾದ – ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಪ್ರದೇಶದಲ್ಲಿ ಭಾರೀ ಮಳೆಯಾಗಲಿದ್ದು (11-20 ಸೆಂ.ಮೀ) ಆರೆಂಜ್ ಅಲರ್ಟ್ ಫೋಷಣೆ ಮಾಡಲಾಗಿದೆ. ತಮಿಳುನಾಡು, ಪುದುಚೇರಿ ಮತ್ತು ಕೇರಳ, ಮಾಹೆ, ಕರಾವಳಿ ಕರ್ನಾಟಕ ಭಾರೀ ಮಳೆ ಸಾಧ್ಯತೆ ಪ್ರದೇಶಗಳು.
ಕೇರಳದ ಪಟ್ಟಂತಿಟ್ಟ ಜಿಲ್ಲೆಯ ಪುತ್ತಿಚೇರಿ ಎಂಬಲ್ಲಿ ಮಳೆಯಿಂದ ಉಂಟಾದ ಕೃತಕ ಪ್ರವಾಹದ ವಿಡಿಯೋ ಕೇರಳದ ವೆದರ್ ಮೆನ್ ವರದಿ ಮಾಡಿದೆ #Kerala #keralarains #rain pic.twitter.com/PEcHQgjO8d
— theruralmirror (@ruralmirror) November 14, 2021
Advertisement
ಕನ್ಯಾಕುಮಾರಿಯಲ್ಲಿ ಸತತ ಮೂರನೇ ದಿನವೂ ಭಾರಿ ಮಳೆಯಾಗುತ್ತಿದ್ದು, ಭಾನುವಾರ ಬೆಳಗ್ಗೆ 8 ಗಂಟೆವರೆಗಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 109.53 ಮಿಮೀ ಮಳೆ ದಾಖಲಾಗಿದೆ. ಜಿಲ್ಲೆಯ 14 ಸ್ಥಳಗಳಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದ್ದು, ಮೂರು ಸ್ಥಳಗಳಲ್ಲಿ ತಲಾ 210 ಮಿ.ಮೀ. ಭಾನುವಾರ ಬೆಳಗಿನ ಜಾವದವರೆಗೆ 72 ಗುಡಿಸಲುಗಳು ಹಾನಿಗೊಳಗಾಗಿದ್ದು, 3,200ಕ್ಕೂ ಹೆಚ್ಚು ಜನರನ್ನು ಜಲಾವೃತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. 3,000 ಕ್ಕೂ ಹೆಚ್ಚು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Scenes from Konni as flooding is seen across Kottayam, Kollam and Pathanamthitta districts#Kerala #KeralaRains #Keralarain #Flood pic.twitter.com/okDAvxGqNI
Advertisement— West Coast Weatherman (@RainTracker) November 14, 2021
ಭಾರೀ ಮಳೆಯಿಂದಾಗಿ ಕೇರಳ ರಾಜ್ಯದ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ರೆಡ್ ಅಲರ್ಟ್ ಮಾರ್ಕ್‌ಗೆ ಏರಿದ್ದು, ಇಡುಕ್ಕಿ ಜಲಾಶಯದ ಅಣೆಕಟ್ಟಿನ ಒಂದು ಶಟರ್ ಅನ್ನು ತೆರೆಯಲು ಅಧಿಕಾರಿಗಳು ತಿಳಿಸಿದ್ದಾರೆ.
ಈಗಿನ ಹವಾಮಾನ ವರದಿ ಪ್ರಕಾರ ದಕ್ಷಿಣ ಕೇರಳ ಮತ್ತು ತಮಿಳುನಾಡಿನಲ್ಲಿ ಭಾನುವಾರ ಮತ್ತು ಸೋಮವಾರದಂದು ಕೇರಳದ ಮೇಲೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Advertisement
ಅಂಡಮಾನ್ ಸಮುದ್ರದ ಮಧ್ಯ ಭಾಗಗಳಲ್ಲಿ ವಾಯುಭಾರ ಕುಸಿತ ಬಲಗೊಂಡಿದ್ದು ಇದರ ಕಾರಣದಿಂದ ಕೇರಳ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಮಳೆಯ ಪ್ರಮಾಣವು ಮುಂದುವರಿದು ನಂತರ ಕಡಿಮೆಯಾಗುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಕರಾವಳಿ ಕರ್ನಾಟಕದ ಕಾಸರಗೋಡು ಭಾಗದಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ.