ವಾರದ ಬಳಿಕ ಮತ್ತೆ ಸುಳ್ಯ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದೆ. ಬಳ್ಪದಲ್ಲಿ 52 ಮಿಮೀ ಮಳೆಯಾದರೆ ಕೇನ್ಯದಲ್ಲಿ 41 ಮಿಮೀ ಮಳೆಯಾಯಿತು. ಉಳಿದಂತೆ ಗುತ್ತಿಗಾರು ಕಮಿಲದಲ್ಲಿ 32 ಮಿಮೀ, ಮೆಟ್ಟಿನಡ್ಕದಲ್ಲಿ 28 ಮಿಮೀ, ಕಡಬ,ಮರ್ಧಾಳದಲ್ಲಿ 22 ಮಿಮೀ, ಕಲ್ಮಡ್ಕದಲ್ಲಿ 24 ಮಿಮೀ, ಉಪ್ಪಿನಂಗಡಿ ಕೈಲಾರಿನಲ್ಲಿ 12 ಮಿಮೀ ಮಳೆಯಾಗಿದೆ.ಕಾರ್ಕಳ ಬಜಗೋಳಿ ಸಹಿತ ವಿವಿದೆಡೆ ಮಳೆಯಾಗಿದೆ.
ಗಾಳಿ ಮಳೆಯ ಕಾರಣದಿಂದ ಸುಳ್ಯ ತಾಲೂಕಿನ ಐವರ್ನಾಡು, ಗುತ್ತಿಗಾರು ಆಸುಪಾಸಿನ ವಿವಿದಡೆ ಮರ ಧರೆಗೆ ಉರುಳಿದೆ. ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel