ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲು ಗಾಳಿ ಸಹಿತ ಮಳೆಯಾಗಿದೆ.
ಸುಳ್ಯ ತಾಲೂಕಿನ ಪಂಜ, ಕಲ್ಮಡ್ಕ, ಗುತ್ತಿಗಾರು, ಸುಳ್ಯ, ಕೊಲ್ಲಮೊಗ್ರ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಮಳೆಯಾಗಿದೆ. ಪುತ್ತೂರು ತಾಲೂಕಿನ ಹಲವು ಕಡೆಗಳಲ್ಲೂ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ಸಿಡಿಲಿನ ಅಬ್ಬರ ಜೋರಾಗಿತ್ತು, ಉತ್ತಮ ಮಳೆಯಾಗಿದೆ.ಉಳಿದಂತೆ ಮಂಗಳೂರು, ಬಂಟ್ವಾಳ ಸೇರಿದಂತೆ ದಕ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಸಿಡಿಲಿಗೆ ತೆಂಗಿನ ಮರಕ್ಕೆ ಬೆಂಕಿ ತಗುಲಿದ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಬಳಿ ನಡೆದಿದೆ.ವಿಟ್ಲದಲ್ಲಿ ಭಾರೀ ಗಾಳಿ ಮಳೆಗೆ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲುಗಳ ರಾಶಿ ಕುಸಿದ ಹಲವು ವಾಹನಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ರಾಜ್ಯದ ಕೊಡಗು, ಮೈಸೂರು, ಕೆ ಆರ್ ಪೇಟೆ, ಬೆಂಗಳೂರಿನ ವಿವಿದೆಡೆ, ಚಿಕ್ಕಬಳ್ಳಾಪುರದ ಕೆಲವು ಕಡೆ, ಕುಣಿಗಲ್, ತುಮಕೂರು, ಪ್ರದೇಶದಲ್ಲೂ ಮಳೆಯಾದ ಬಗ್ಗೆ ವರದಿಯಾಗಿದೆ. ಕಾಸರಗೋಡು ಜಿಲ್ಲೆಯ ವಿವಿದೆಡೆಯೂ ಮಳೆಯಾದ ಬಗ್ಗೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಸಿಡಿಲು ಸಹಿತ ಗಾಳಿ ಮಳೆ. pic.twitter.com/KH21EmvdrK
Advertisement— theruralmirror (@ruralmirror) April 13, 2022
ಭರ್ಜರಿ ಮಳೆ ಹಾಗೂ ಸಿಡಿಲಿನ ಅಬ್ಬರ #ಮಳೆ #rain #thunderstorms pic.twitter.com/5frk0XCiPf
— theruralmirror (@ruralmirror) April 13, 2022
Advertisement