ವಾಯುಭಾರ ಕುಸಿತ ಹಾಗೂ ಮುಂಗಾರು ಮಾರುತ ಪ್ರವೇಶದ ಆರಂಭದಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಸುರಿಯುತ್ತಿದೆ. ಬುಧವಾರ ಇಡೀ ದಿನ ಸುರಿದ ಮಳೆ ಸುಬ್ರಹ್ಮಣ್ಯದಲ್ಲಿ 151 ಮಿಮೀ ದಾಖಲಾಗಿದೆ. ದ ಕ ಜಿಲ್ಲೆಯ ಹಲವು ಕಡೆಗಳಲ್ಲಿ 100 ಮಿಮೀಗಿಂತಲೂ ಅಧಿಕ ಮಳೆ ಸುರಿದಿದೆ. ಮುಂಜಾಗ್ರತಾ ಕ್ರಮವಾಗಿ ದಕ ಜಿಲ್ಲೆಯಲ್ಲಿ ಗುರುವಾರ ಶಾಲೆಗೆ ರಜೆ ಘೋಷಿಸಲಾಗಿದೆ.
ದ ಕ ಜಿಲ್ಲೆಯಲ್ಲಿ ನಿರಂತರ ಮಳೆಯ ಕಾರಣದಿಂದ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮೇ.19ರ ಗುರುವಾರ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ತೀವ್ರತೆ ಪಡೆದುಕೊಂಡಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಅಬ್ಬರ ಮುಂದುವರೆಯಲಿದೆ. ದ ಕ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಸುಬ್ರಹ್ಮಣ್ಯ 151 ಮಿಮೀ, ಚೆಂಬು 148 ಮಿಮೀ, ನೆಕ್ರಕಜೆ(ಕಾಸರಗೋಡು) 148 ಮಿಮೀ, ಕಲ್ಲಾಜೆ 143 ಮಿಮೀ, ಮಡಪ್ಪಾಡಿ 143 ಮಿಮೀ, ಬಳ್ಪ ಪಟೋಳಿ 125, ಗುತ್ತಿಗಾರು ಹಾಲೆಮಜಲು 124 ಮಿಮೀ, ದೊಡ್ಡತೋಟ 122 ಮಿಮೀ, ಬಳ್ಪ ಕೋಡಿಗದ್ದೆ 120 ಮಿಮೀ, ಎಣ್ಮೂರು 115 ಮಿಮೀ, ಕೇನ್ಯ 112 ಮಿಮೀ, ಕಮಿಲ 111 ಮಿಮೀ , ಕಲ್ಮಡ್ಕ 109 ಮಿಮೀ, ಸುಳ್ಯ 109 ಮಿಮೀ , ಅಯ್ಯನಕಟ್ಟೆ 105 ಮಿಮೀ, ಕರಿಕಳ 104 ಮಿಮೀ,ಕೊಲ್ಲಮೊಗ್ರ 99 ಮಿಮೀ, ಬೆಳ್ಳಾರೆ ಕಾವಿನಮೂಲೆ 93 ಮಿಮೀ, ಚೊಕ್ಕಾಡಿ 87 ಮಿಮೀ, ಬಜಗೋಳಿಯಲ್ಲಿ 79ಮಿಮೀ , ಮುರುಳ್ಯ 77 ಮಿಮೀ, ಕೋಡಿಂಬಾಳ 75ಮಿಮೀ, ಉಡುಪಿ 75ಮಿಮೀ, ಆರ್ಯಾಪು 67 ಮಿಮೀ, ಕೊಪ್ಪ ರಾಗೋಡು 67 ಮಿಮೀ, ಕಡಬ 64 ಮಿಮೀ, ನೆಲ್ಯಾಡಿ 63 ಮಿಮೀ, ಪಾಂಡೇಶ್ವರ 57 ಮಿಮೀ, ಕೊಳ್ತಿಗೆ 51 ಮಿಮೀ, ಪೆಲತ್ತಡ್ಕ 49 ಮಿಮೀ, ಅಡೆಂಜ ಉರುವಾಲು 43 ಮಿಮೀ, ಬಲ್ನಾಡು 40 ಮಿಮೀ, ಕೋಡಪದವು 40 ಮಿಮೀ, ಕೈರಂಗಳ 38 ಮಿಮೀ, ಬೆಳ್ತಂಗಡಿ ನಗರ 34 ಮಿಮೀ, ಮಳೆಯಾಗಿದೆ.