ಮುಂಗಾರು ಮಳೆ ಆರಂಭವಾದರೂ ಮುಂಗಾರು ಮಾರುತ ಚುರುಕಾಗಲಿಲ್ಲ. ಹೀಗಾಗಿ ಮಳೆಗಾಲದ ವಾತಾವರಣ ಕಂಡುಬಂದಿರಲಿಲ್ಲ. ಆದರೆ ಶುಕ್ರವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುಳ್ಯ ತಾಲೂಕಿನ ವಿವಿದೆಡೆ ಕಂಡುಬಂದಿದೆ. ಬಳ್ಪ, ಕಮಿಲ, ಗುತ್ತಿಗಾರು ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ ಒಂದು ಗಂಟೆಯಲ್ಲಿ 110 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ. ಉಳಿದಂತೆ ರಾಜ್ಯದ ವಿವಿದೆಡೆ ಮಳೆಯಾಗಿದೆ. ಧರ್ಮಸ್ಥಳ, ಪುತ್ತೂರು ತಾಲೂಕಿನ ವಿವಿಧ ಕಡೆ, ಬೆಳ್ತಂಗಡಿ, ಪಾವಗಡ, ತುಮಕೂರು, ಚಿಕ್ಕಮಗಳೂರು, ಕಳಸ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಳ್ಯ ತಾಲೂಕಿನ ವಿವಿದೆಡೆ ಧಾರಾಕಾರ ಮಳೆ"