ಕಳೆದ 24 ಗಂಟೆಯಲ್ಲಿ ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ರಾತ್ರಿ ಇಡೀ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆ ಮುಂದುವರಿದಿದೆ. ಸುಳ್ಯದಲ್ಲಿ 136 ಮಿಮೀ ಮಳೆಯಾಗಿದೆ.
ಉಳಿದಂತೆ ಕೊಲ್ಲಮೊಗ್ರ 99 ಮಿಮೀ, ಕಾರ್ಕಳ ಬಜಗೋಳಿ 118 ಮಿಮೀ, , ಚೊಕ್ಕಾಡಿ 92 ಮಿಮೀ, ಕಲ್ಲಾಜೆ 100 ಮಿಮೀ,ಕಮಿಲ 100 ಮಿಮೀ, ಕೋಡಿಂಬಾಳ 89 ಮಿಮೀ, ಆರ್ಯಾಪು ಪುತ್ತೂರು 82 ಮಿಮೀ, ಬೆಳ್ಳಾರೆ ಕಾವಿನಮೂಲೆ 97 ಮಿಮೀ, ಕಾಸರಗೋಡಿನಲ್ಲಿ 156 ಮಿಮೀ ಮಳೆಯಾಗಿದೆ. ಧಾರಾಕಾರ ಮಳೆ ಮುಂದುವರಿದಿದೆ.
ಧಾರಾಕಾರ ಮಳೆಯ ನಡುವೆ ಸಂಪಾಜೆ-ಕಲ್ಲುಗುಂಡಿ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಯಾವುದೇ ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel