ಮಡಿಕೇರಿ ತಾಲೂಕು ಎಂ ಚೆಂಬು ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 192 ಮಿಮೀ ಮಳೆ ದಾಖಲಾಗಿದೆ. ರಾತ್ರಿ ಇಡೀ ಮಳೆ ಸುರಿಯುತ್ತಿತ್ತು. ಆದರೆ ಶನಿವಾರ ಬೆಳಗ್ಗೆ ಮಳೆಯ ಪ್ರಮಾಣ ತಗ್ಗಿದೆ. ಮಳೆ, ಭೂಮಿ ಕಂಪನ ಇತ್ಯಾದಿಗಳಿಂದ ಸ್ಥಳೀಯ ಜನರಲ್ಲಿ ಆತಂಕ ಇದೆ. ಯಾವುದೇ ಹಾನಿ, ಅಪಾಯ ಇದುವರೆಗೂ ಸಂಭವಿಸಲಿಲ್ಲ. ಇಲಾಖೆಗಳು ಕೂಡಾ ಜನರಿಗೆ ಧೈರ್ಯ ತುಂಬಿವೆ. ಕಳೆದ 24 ಗಂಟೆಗಳಲ್ಲಿ ಹಲವು ಕಡೆಗಳಲ್ಲಿ 100 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ.
ಭಾರೀ ಮಳೆಯ ಕಾರಣದಿಂದ ಸಂಪಾಜೆ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸಣ್ಣಪುಟ್ಟ ಕುಸಿತಗಳು ಸಂಭವಿಸಿದೆ. ನದಿ, ಹಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಸದ್ಯ ಮಳೆಯ ಪ್ರಮಾಣ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಕರಿಕೆ-148 ಮಿಮೀ, ಪೆರಾಜೆ -145 ಮಿಮೀ, ಸಂಪಾಜೆ 136 ಮಿಮೀ ಮಳೆಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel