ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿತ್ತು. ಎಲ್ಲೆಡೆಯೂ ಭಾರೀ ಮಳೆ. ಹಲವು ಕಡೆಗಳಲ್ಲಿ 150 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ. ಸುಳ್ಯದ ಕಲ್ಲಾಜೆ, ಬೆಳ್ತಂಗಡಿ, ಕಾರ್ಕಳ ಪ್ರದೇಶದಲ್ಲಿ 200 ಮಿಮೀ ಮಳೆಯಾಗಿದೆ.
ಚೆಂಬು ಪ್ರದೇಶದಲ್ಲಿ ಸತತವಾಗಿ 100 ಮಿಮೀಗಿಂತ ಹೆಚ್ಚು ಮಳೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 191 ಮಿಮೀ ಮಳೆಯಾಗಿದೆ. ಎಲ್ಲೆಡೆಯೂ ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಮುಂದಿನ 24 ಗಂಟೆಗಳ ಕಾಲ ಆರೆಂಜ್ ಎಲರ್ಟ್ ಇದೆ. ಉತ್ತಮ ಮಳೆಯಾಗಬಹುದು.
ಭಾರೀ ಮಳೆಗೆ ಉಕ್ಕಿ ಹರಿದ ಸುಳ್ಯ ತಾಲೂಕಿನ ಪಂಜದ ನದಿ. ಸುಬ್ರಹ್ಮಣ್ಯ-ಪಂಜ-ಪುತ್ತೂರು ಸಂಪರ್ಕ ಕಡಿತ.#ಮಳೆ #rain #karnatakarains #ಮಲೆನಾಡು #ruralmirror pic.twitter.com/SaGy8m9u4l
— theruralmirror (@ruralmirror) July 10, 2022
ಎಲ್ಲೆಲ್ಲೆ ಎಷ್ಟು ಮಳೆ ?
- ಸುಳ್ಯ 166 ಮಿಮೀ,
- ಕಲ್ಲಾಜೆಯಲ್ಲಿ 204 ಮಿಮೀ,
- ಮಡಪ್ಪಾಡಿ 75 ಮಿಮೀ,
- ಗುತ್ತಿಗಾರು-ಮೆಟ್ಟಿನಡ್ಕ 214 ಮಿಮೀ,
- ಕಮಿಲ 169 ಮಿಮೀ ,
- ಬಾಳಿಲ 169 ಮಿಮೀ ,
- ಕೊಲ್ಲಮೊಗ್ರ 189 ಮಿಮೀ,
- ಸುಬ್ರಹ್ಮಣ್ಯ 173 ಮಿಮೀ ,
- ಕಲ್ಮಡ್ಕ 176 ಮಿಮೀ,
- ಬಳ್ಪ 211 ಮಿಮೀ,
- ಬೆಳ್ಳಾರೆ 145 ಮಿಮೀ ,
- ಬೆಳ್ತಂಗಡಿ 179 ಮಿಮೀ,
- ಪುತ್ತೂರು ಮುಂಡೂರು 110 ಮಿಮೀ ,
- ಕೋಡಿಂಬಾಳ 144 ಮಿಮೀ,
- ಕಾರ್ಕಳದಲ್ಲಿ 200 ಮಿಮೀ ಮಳೆಯಾಗಿದೆ.
ನೇತ್ರಾವತಿ ಹಾಗೂ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಹಲವು ಕಡೆಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ ಬಂಟ್ವಾಳದಲ್ಲಿ ಅಪಾಯಮಟ್ಟದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ ಸಂಭವಿಸಿದೆ. ಸುಳ್ಯ ತಾಲೂಕಿನ ಪಂಜದಲ್ಲಿ ನದಿ ತುಂಬಿ ಹರಿದು ಪಂಜ-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿದು ಸ್ನಾನ ಘಟ್ಟ ಜಲಾವೃತವಾಗಿದೆ. ಸಂಪಾಜೆ ಕಲ್ಲುಗುಂಡಿಯಲ್ಲಿ ನೀರು ಹರಿದು ತೋಟಗಳಿಗೆ , ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ಭೂಕುಸಿತ ಸಂಭವಿಸಿ ಮನೆ ಅಪಾಯದಲ್ಲಿದೆ. ಈಗಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.
ಭಾರೀ ಮಳೆಗೆ ಉಕ್ಕಿ ಹರಿದ ಕುಮಾರಧಾರಾ ನದಿ.#ಮಳೆ #rain #karnatakarains #karnatakarain #ಮಲೆನಾಡು #ruralmirror pic.twitter.com/J1QGtaA9uM
— theruralmirror (@ruralmirror) July 10, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel