ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು ಎರಡು ಗಂಟೆಯಿಂದ ಭೀಕರ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಕಲ್ಮಕಾರು, ಕಲ್ಲಾಜೆ, ಹರಿಹರ, ಬಾಳುಗೋಡು ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದೆ. ಭಾರೀ ಮಳೆಗೆ ಹೊಳೆ ನೀರು ಹಕ್ಕಿ ಹರಿದು ಕೊಲ್ಲಮೊಗ್ರ ಹಾಗೂ ಹರಿಹರದಲ್ಲಿ ಸೇತುವೆ ಮುಳುಗಡೆಯಾಗಿದೆ. ಹರಿಹರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಈಗಲೂ ಮಳೆ ಸುರಿಯುತ್ತಿದೆ. ಇದುವರೆಗೆ ಇಷ್ಟು ಪ್ರಮಾಣದಲ್ಲಿ ಕೆಲ ವರ್ಷಗಳಲ್ಲೇ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇದೀಗ ಒಮ್ಮೆಲೇ ಸುರಿದ ಮಳೆ ಭೀಕರವಾಗಿದೆ. ಇತಿಹಾಸ ಬರೆದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಲ್ಮಕಾರು ಪ್ರದೇಶದಲ್ಲಿ ಆತಂಕದ ವಾತಾವರಣ ಹೆಚ್ಚಿದೆ. ನಿನ್ನೆ ತಡರಾತ್ರಿ ಭಾರೀ ಸ್ಫೋಟದೊಂದಿಗೆ ಭೂಕುಸಿತ ಸಂಭವಿಸಿತ್ತು. ಕಟ್ಟ ಕೊಲ್ಲಮೊಗ್ರದಲ್ಲಿ ಮೂರು ಗಂಟೆಯಲ್ಲಿ 200 ಮಿಮೀಗಿಂತಲೂ ಅಧಿಕ ಮಳೆಯಾಗಿದೆ.
ಸುಳ್ಯ ತಾಲೂಕಿನ ಹರಿಹರದಲ್ಲಿ ಭಾರೀ ಮಳೆಗೆ ಉಕ್ಕಿನ ಹರಿದ ನೀರು.ಸೇತುವೆ ಜಲಾವೃತ | #HeavyRain #ಮಳೆ pic.twitter.com/D397QyH4t1
— theruralmirror (@ruralmirror) August 1, 2022
ಭಾರೀ ಮಳೆಗೆ ಸುಳ್ಯ ತಾಲೂಕಿನ ಹರಿಹರ ಪೇಟೆಯ ದೃಶ್ಯ. #HeavyRain #ಮಳೆ #sullia #ruralmirror pic.twitter.com/dZgtmHsKfn
— theruralmirror (@ruralmirror) August 1, 2022
ಸುಳ್ಯ ತಾಲೂಕಿನ #ಕಲ್ಲಾಜೆ ಯಲ್ಲಿ ಭೀಕರ #ಮಳೆ ಗೆ ಹರಿದು ಬಂದ ನೀರು | #HeavyRain rain at #Kallaje , near Sullia Taluk. pic.twitter.com/THIvgJxHBp
— theruralmirror (@ruralmirror) August 1, 2022
ಸುಳ್ಯದ ಗ್ರಾಮೀಣ ಭಾಗದಲ್ಲಿ ಭಾರೀ ಮಳೆ | ಹರಿಹರದಲ್ಲಿ ಮನೆಗಳಿಗೆ ನುಗ್ಗಿದ ನೀರು | #rain #HeavyRain #ಮಳೆ #sullia #ruralmirror pic.twitter.com/ZPSooWmc4z
— theruralmirror (@ruralmirror) August 1, 2022
#HeavyRain at Kandrappady, Sullia Taluk | Waterlogged | Foot bridge damaged |
ಭಾರೀ ಮಳೆ | ಕಾಲುಸಂಕ ನೀರು ಪಾಲು |#rain #ಮಳೆ #ruralmirror #sullia pic.twitter.com/Ia7lf3puvT— theruralmirror (@ruralmirror) August 1, 2022