Advertisement
ವೆದರ್ ಮಿರರ್

ಹವಾಮಾನ ವರದಿ | 23-08-2025 | ಆ.26 ರಿಂದ ಮತ್ತೆ ಮಳೆ ಇದೆಯೇ..?

Share

24.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಸಂಜೆ ಅಥವಾ ರಾತ್ರಿ ಅಲ್ಲಲ್ಲಿ ತುಂತುರು ಹಾಗೂ ಒಂದೆರಡು ಕಡೆ ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಕರಾವಳಿ ತೀರ ಭಾಗಗಳ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.  ಈಗಿನಂತೆ ಇದೇ ವಾತಾವರಣ ಆಗಸ್ಟ್ 25 ರ ತನಕ ಮುಂದುವರಿಯಲಿದ್ದು, 26 ರಿಂದ 31ರ ತನಕ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ….

ಮಲೆನಾಡು : ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುನ್ಸೂಚನೆ ಇದ್ದು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಹಾಸನದ ಒಳನಾಡಿನ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 25ರ ತನಕ ಇದೇ ವಾತಾವರಣ ಮುಂದುವರಿಯ ಸಾಧ್ಯತೆಗಳಿದ್ದು, 26 ರಿಂದ ಅಲ್ಲಲ್ಲಿ ಮಳೆ ಆರಂಭವಾಗುವ ಸೂಚನೆಗಳಿವೆ.…… ಮುಂದೆ ಓದಿ……

ಒಳನಾಡು : ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 24ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣ ಇರಲಿದ್ದು, 26 ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಕೃಷಿ ವೆಚ್ಚ ಕಡಿಮೆ ಮಾಡಲು ಇಲ್ಲಿ ರೈತರ ಹೊಸ ಹೆಜ್ಜೆ…

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…

12 minutes ago

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…

9 hours ago

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

11 hours ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

17 hours ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

18 hours ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

19 hours ago