ಮೆಕ್ಕೆಜೋಳ ಬೆಳೆಯುವ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆಯು ಬಾರಿ ಮಳೆಯಿಂದ ನಾಶವಾಗಿದ್ದು, ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸುವ ಎಲ್ಲ ಲಕ್ಷಣಗಳಿವೆ.
ಈ ವರ್ಷಾರಂಭದಲ್ಲಿ ಮಳೆ ಉತ್ತಮ ಆರಂಭ ಕಂಡಿದ್ದು, ಇದರಿಂದಾಗಿ ಬೇಸಾಯದ ಚಟುವಟಿಕೆಗೂ ಕೂಡ ಉತ್ತಮವಾಗಿ ಪ್ರಾರಂಭಗೊಂಡಿದ್ದವು. ಸಕಾಲದಲ್ಲಿ ಉತ್ತಮ ಬಿತ್ತನೆಯೂ ಸಾಧ್ಯವಾಗಿತ್ತು. ತದನಂತರ ಏರ್ಪಟ್ಟಿದ್ದ ಬಿತ್ತನೆಬೀಜ, ಗೊಬ್ಬರ ಮತ್ತು ರಸಗೊಬ್ಬರ ಅಭಾವದ ನಡುವೆಯೂ ಉತ್ತಮ ಮಳೆ ಮತ್ತು ಉಳುಮೆಯಿಂದ ಬೆಳೆಗಳು ಹುಲಸಾಗಿ ಬೆಳೆದಿದ್ದವು. ಈ ಹಿನ್ನಲೆಯಲ್ಲಿ ರೈತರು ಉತ್ತಮ ಇಳುವರಿಯ ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲದೆ ಆರ್ಥಿಕವಾಗಿ ಈ ಬಾರಿ ಅಲ್ಪಸ್ವಲ್ಪ ಲಾಭಗಳಿಸುವ ಚಿಂತನೆಯಲ್ಲಿದ್ದರು.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ನೆಲಕ್ಕೆ ಬಿದ್ದು ಮೊಳಕೆಯೊಡೆದು ಹಾಳಾಗುವ ಪರಿಸ್ಥಿತಿಗೆ ತಲುಪಿದೆ. ಇದೀಗ ಆರ್ಥಿಕವಾಗಿ ನೆಲಕಚ್ಚಿರುವ ರೈತರನ್ನು ಮೇಲೆತ್ತುವವರು ಯಾರು ಎನ್ನುವ ಆತಂಕ ಶುರುವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

