ನವೆಂಬರ್‌ವರೆಗೆ ಸುರಿದ ಭಾರೀ ಮಳೆಯ ಕಾರಣದಿಂದ ಕೃಷಿಕರು ಸಂಕಷ್ಟ ಅನುಭವಿಸಿದ್ದರು. ಭತ್ತ ಸಹಿತ ಆಹಾರ ಬೆಳೆಗಳು ಹಾನಿಗೆ ಒಳಗಾಗಿದ್ದವು. ಇದೀಗ ಈ ಸಂಕಷ್ಟದ ಮೊದಲ ಅನುಭವ ಗ್ರಾಹಕರಿಗೆ ಆಗುತ್ತಿದೆ. ತರಕಾರಿ ಬೆಲೆಗಳು ಮತ್ತೆ ಏರಿಕೆಯ ಹಾದಿಯಲ್ಲಿ ಮುಂದುವರಿಯುತ್ತಿದೆ.
ಮಳೆಯ ಕಾರಣದಿಂದ ತರಕಾರಿ ಬೆಳೆಗಳು ನಾಶವಾಗಿರುವ ಹಿನ್ನೆಲೆಯಿಂದಾಗಿ ಟೊಮೊಟೋ ,ಬೀನ್ಸ್ ,ಈರುಳ್ಳಿ ಹಾಗೂ ಇನ್ನಿತರ ತರಕಾರಿಗಳ ಬೆಲೆಗಳು ಹೆಚ್ಚಳವಾಗಿದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ. ಬದನೆಕಾಯಿ, ಮೂಲಂಗಿ ರೂಪಾಯಿ 8೦ ಕ್ಕೆ ಏರಿಕೆಯಾಗಿದೆ. ಟೊಮೆಟೊ ಬೆಲೆಯು ಮತ್ತೆ ಏರಿಕೆ ಹಾದಿಯಲ್ಲಿದೆ. ಬೀನ್ಸ್ 9೦ ರೂಪಾಯಿಗೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel