ಭಾರಿ ಮಳೆ ಹಿನ್ನೆಲೆ ಕೊಕ್ಕಡ ಗ್ರಾಮದ ಎರಡು ಕಡೆಗಳಲ್ಲಿ ಮಂಗಳವಾರ ಮನೆ ಕುಸಿತವಾಗಿದೆ. ಗ್ರಾಮದ ಬರಮೇಲು ನಿವಾಸಿ ಕೃಷ್ಣ ನಾಯ್ಕ ಅವರ ಮನೆಗೆ ಭಾಗಶ: ಹಾನಿಯಾಗಿದೆ. ಹಳ್ಳಿಂಗೇರಿ ನಿವಾಸಿ ಯಮುನಾ ಮಡಿವಾಳ ಅವರ ಮನೆಯ ಹೊರಂಗಣ ಕುಸಿತವಾಗಿದ್ದು ಚಾವಣಿ ಕೆಳಗೆ ಬಿದ್ದಿದೆ. ಮನೆಯವರೆಲ್ಲರೂ ಪ್ರಾಣಾಪಯದಿಂದ ಪಾರಾಗಿದ್ದಾರೆ.
ವಿಪರೀತ ಮಳೆಯ ಕಾರಣ ಮನೆಯ ಗೋಡೆಗಳಿಗೆ ನೀರು ಬಿದ್ದು ಗೋಡೆಯಲ್ಲಿ ಕುಸಿತ ಉಂಟಾದ ಕಾರಣ ಮನೆಗೆ ಹಾನಿಯಾಗಿದೆ ಎನ್ನಲಾಗಿದೆ.ಸ್ಥಳಕ್ಕೆ ಕೊಕ್ಕಡಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel