ಮಳೆ………. | ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ….!

May 26, 2024
8:06 PM
ಪ್ರಾಕೃತಿಕ ವಿಕೋಪಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಇದಕ್ಕಾಗಿ ಶಾಶ್ವತ ಯೋಜನೆ ರೂಪಿಸಬೇಕಾಗಿದೆ.

ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ…….

Advertisement
Advertisement

ಕೃಷಿ ದೃಷ್ಟಿಯಿಂದ ಈ ಮಳೆಯ ಪರಿಣಾಮ ಲಾಭವೋ ನಷ್ಟವೋ ವೈಯಕ್ತಿಕವಾಗಿ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ ಅಂತರ್ಜಲದ ಮಟ್ಟ ಮಾತ್ರ ಉತ್ತಮವಾಗಬಹುದು ಎಂದು ಹೇಳಲಾಗುತ್ತದೆ…..

Advertisement

ಏನೇ ಇರಲಿ, ಪ್ರಕೃತಿಯ ಎಲ್ಲಾ ವೈಪರೀತ್ಯಗಳನ್ನು ನಾವು ಸಹಿಸಲೇಬೇಕು. ಅದು ಅನಿವಾರ್ಯ. ಆದರೆ ಆಡಳಿತ ವ್ಯವಸ್ಥೆ, ಪರಿಸರ, ಕೃಷಿ ಮತ್ತು ನೀರಾವರಿ ತಜ್ಞರು ಈ ಅಧಿಕ ಮಳೆಯ ಗರಿಷ್ಠ ಉಪಯೋಗ ಪಡೆಯಲು ಮತ್ತು ಕೆಲವು ಶಾಶ್ವತ ಭವಿಷ್ಯದ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಬೇಕು…..

ವಾತಾವರಣ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ವರ್ಷಗಳ ನಂತರ ಬರಗಾಲ ಬರಬಹುದು. ಅದರ ಪರಿಣಾಮ ಕಡಿಮೆ ಮಾಡಲು ನೀರಿನ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಏನಾದರೂ ಕಾರ್ಯ ಯೋಜನೆಯನ್ನು ಜಾರಿಗೊಳಿಸಬೇಕು…..

Advertisement

ಅತೀವೃಷ್ಟಿ ಮತ್ತು ಅನಾವೃಷ್ಟಿಯ ಅನುಭವದ ಆಧಾರದ ಮೇಲೆ ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಿದರೆ ಸಾಧ್ಯವಾಗಬಹುದು. ಮುಖ್ಯವಾಗಿ ಶಾಶ್ವತ ಬರಗಾಲ ಪೀಡಿತ ಪ್ರದೇಶಗಳು ಎಂದು ಕರೆಯಲಾಗುತ್ತಿದ್ದ ಜಿಲ್ಲೆ, ತಾಲ್ಲೂಕುಗಳಲ್ಲಿ ಮುಂದೆ ಮಳೆ ಕಡಿಮೆಯಾದಾಗ ಈಗಿನ ಅಧಿಕ ನೀರು ಅಥವಾ ಅಂತರ್ಜಲ ಮಟ್ಟವನ್ನು ಹೇಗೆ ಒಂದಷ್ಟು ಕಾಲ ಉಪಯೋಗಿಸಿ ಕೊಳ್ಳಬಹುದು ಎಂಬುದರ ಅಂದಾಜು ಭೂಗರ್ಭ ಶಾಸ್ತ್ರಜ್ಞರು ಮಾಡಬಹುದು. ಅದೇರೀತಿ ಈ ಮಳೆಯ ಕಾರಣದಿಂದ ಸೃಷ್ಟಿಯಾದ ಗಿಡಮರಗಳನ್ನು ಒಂದು ದಟ್ಟ ಅರಣ್ಯ ಪ್ರದೇಶವಾಗಿ ಬೆಳೆಸುವ ಸಾಧ್ಯತೆಗಳನ್ನು ಪರಿಶೀಲಿಸಬಹುದು…..

ಸಾಮಾನ್ಯ ಜನರಾದ ನಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ತಿಳಿವಳಿಕೆ ಇರುವುದಿಲ್ಲ. ಆದರೆ ಈ‌ ಕ್ಷೇತ್ರಗಳ ತಜ್ಞರು ಈ ಬಗ್ಗೆ ‌ಜಾಗೃತರಾಗಿ ಸರ್ಕಾರದ ಗಮನಸೆಳೆದು ನಿರಂತರ ಕೆಲಸ ಮಾಡಬೇಕು. ಸಾಮಾನ್ಯ ಜನ ಅವರ ಮೇಲೆಯೇ ಭರವಸೆ ಇಟ್ಟಿರುತ್ತಾರೆ ಮತ್ತು ಅವಲಂಬಿಸಿರುತ್ತಾರೆ. ಇದು ಸರ್ಕಾರ ಮತ್ತು ತಜ್ಞರು ಕರ್ತವ್ಯ ಮತ್ತು ಜವಾಬ್ದಾರಿ……

Advertisement

ಆದರೆ ದುರಾದೃಷ್ಟವಶಾತ್ ‌ರಾಜಕೀಯ ಪಕ್ಷಗಳಿಗೆ, ಮಾಧ್ಯಮದವರಿಗೆ ಈ‌‌ ರೀತಿಯ ಶಾಶ್ವತ ‌ಅಭಿವೃದ್ಧಿಗಿಂತ ಚುನಾವಣೆಯೇ ಬಹುದೊಡ್ಡ ಸುದ್ದಿ ‌ಎಂಬಂತೆ ಪ್ರಚಾರ ಮಾಡುತ್ತಾರೆ. ತಮ್ಮ ಎಲ್ಲಾ ‌ಸಮಯ‌ ತಂತ್ರಗಾರಿಕೆ ಹಣ ಎಲ್ಲವೂ ಅದರಲ್ಲಿಯೇ ಕಳೆಯುತ್ತಾರೆ……

ಅತೀವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಒತ್ತಡ ಬೀಳುತ್ತದೆ. ಕೆಲವೊಮ್ಮೆ ಸಾಲ ಮಾಡಿ ಹಣ ನೀಡಬೇಕಾಗುತ್ತದೆ. ಆದ್ದರಿಂದ ಇಂತಹ ಸಮೃದ್ಧ ನೀರಿನ ಸಂಪನ್ಮೂಲಗಳು ಪ್ರಾಕೃತಿಕವಾಗಿ ಸಿಗುತ್ತಿರುವಾಗ ಇದರ ಪರಿಣಾಮಕಾರಿ ಉಪಯೋಗ ಪಡೆಯುವುದು ಆಡಳಿತದ ಜವಾಬ್ದಾರಿ…..

Advertisement

ಆದರೆ ಏನು ಮಾಡುವುದು ಸರ್ಕಾರ ಎಂಬುದು ರಾಜಕೀಯ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಇರುವಷ್ಟು ದಿನ ಮಾತ್ರ ತಮಗೆ ಎಷ್ಟು ಅನುಕೂಲವೋ ಅಷ್ಟು ಮಾಡಿಕೊಂಡು ಹೋಗುವಾಗ ಮನೆಯನ್ನು ಕೆಡಿಸಿಯೇ ಹೋಗುತ್ತಾರೆ. ಮುಂದೆ ಮತ್ತೊಬ್ಬರು….

ರಾಜ್ಯ ನಮ್ಮ ಸ್ವಂತ ಆಸ್ತಿ. ಅದನ್ನು ಮುಂದಿನ ತಲೆಮಾರಿಗೂ ಕೂಡ ಇನ್ನೂ ಉತ್ತಮವಾಗಿ ಬಿಟ್ಟು ಹೋಗಬೇಕು ಎಂಬ ಕಾಳಜಿ ಕಾಣುತ್ತಿಲ್ಲ. ಪ್ರತಿ ಮಳೆಗಾಲ ಅಥವಾ ಬರಗಾಲ ಇವರಿಗೆ ಹಣ ಮಾಡುವ ದಂಧೆಯಾಗಿದೆ…..

Advertisement

ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಪ್ರಕೃತಿಯ ವಿಕೋಪಗಳ ದುಷ್ಪರಿಣಾಮಗಳನ್ನು ಖಂಡಿತ ಕಡಿಮೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಪ್ರಕೃತಿಯ ಸಹಜ ವೈಪರೀತ್ಯಗಳನ್ನೇ ಸಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗುವುದು ಖಚಿತ…..

ಆದ್ದರಿಂದ ದಯವಿಟ್ಟು ಸರ್ಕಾರ ಯಾರದೇ ಇರಲಿ, ದೀರ್ಘಕಾಲದ ಶಾಶ್ವತ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ಮುಂದೆ ಹಣ ಸಮಯ ಉಳಿತಾಯ ಮಾಡಲು ಪ್ರಯತ್ನಿಸಿ. ಅಧಿಕಾರ ಎಂಬುದು ನಿಮ್ಮ ಸ್ವಂತ ಆಸ್ತಿಯಲ್ಲ. ಅದು ಒಂದು ಸಾರ್ವಜನಿಕ ಸೇವಾ ವೇದಿಕೆ.ಅದೇ ಮಾನವೀಯ ಧರ್ಮ……..

Advertisement
ಬರಹ :
ವಿವೇಕಾನಂದ. ಎಚ್.ಕೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಜುಲೈ 1…. ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ… : ಇಂದು ವಿಶೇಷ ವೃತ್ತಿಗಳ ದಿನ
July 1, 2024
12:57 PM
by: The Rural Mirror ಸುದ್ದಿಜಾಲ
ಗಾಯವಾದ ಕೆಚ್ಚಲಿನಿಂದ ತೊಟ್ಟಿಕ್ಕುತ್ತಿರುವ ನೀರು : ಹೋಮಿಯೊಪತಿ ಚಿಕಿತ್ಸೆ
July 1, 2024
12:39 PM
by: The Rural Mirror ಸುದ್ದಿಜಾಲ
ಎರೆಹುಳಗೊಬ್ಬರ ಕುರಿತ ಮಾಹಿತಿ : ಎರೆಹುಳ ಗೊಬ್ಬರವನ್ನು ಖರೀದಿಸುವಾಗ ಎಚ್ಚರ
July 1, 2024
12:17 PM
by: The Rural Mirror ಸುದ್ದಿಜಾಲ
ಆಹಾರ ಕಲಬೆರಕೆ : ಹೊರಗೆ ತಿನ್ನುವ ಮುಂಚೆ ಈ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಳ್ಳಿ
July 1, 2024
11:25 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror