ಭಾರೀ ಮಳೆಗೆ ಎಲ್ಲೆಡೆಯೂ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಮನೆಯಲ್ಲೇ ಕುಳಿತಿರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಟಿ ವಿ ಸೇರಿದಂತೆ ಮೊಬೈಲ್ ವೀಕ್ಷಣೆ ಹೆಚ್ಚಿರುತ್ತದೆ. ಆದರೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಇಲಾಖೆಯ ಪವರ್ ಮ್ಯಾನ್ ತಂಡದ ಕೆಲಸಗಳಿಗೆ ಸಲಾಂ ಹೇಳಬೇಕಿದೆ.
ಮಳೆಯ ನಡುವೆ ಏಣಿಯ ಮೂಲಕ ಕಂಬ ಏರಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅದರಲ್ಲೂ ಈಗಾಗಲೇ ಭೂಕಂಪನ ಹಾಗೂ ಭೂಕುಸಿತದ ಭಯದಿಂದ ಇರುವ ಊರಾದ ಸಂಪಾಜೆ – ಚೆಂಬು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದೇ ಸಾಹಸದ ಕೆಲಸ. ಗ್ರಾಮೀಣ ಭಾಗದಲ್ಲಿ ಗಾಳಿ ಮಳೆಗೆ ಮರ ಬೀಳುವುದು , ಮರದ ಗೆಲ್ಲು ಬೀಳುವುದು ಎಚ್ ಟಿ ತಂತಿ ಸಮಸ್ಯೆಯಾಗುವುದು ಇದ್ದೇ ಇರುತ್ತದೆ. ಈ ಸಮಯದಲ್ಲಿ ಮಳೆ-ಗಾಳಿ ಎಂದು ಲೆಕ್ಕಿಸದೆ ಪವರ್ ಮ್ಯಾನ್ ಸ್ಥಳಕ್ಕೆ ತೆರಳಿ ವಿದ್ಯುತ್ ಸುಸ್ಥಿತಿಗೆ ತರಲು ಪ್ರಯತ್ನ ಪಡುತ್ತಿರುತ್ತಾರೆ. ಇಂತಹ ಕೆಲಸಗಳಿಂದಲೇ ಪ್ರತೀ ಮನೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿದೆ.
ಭಾರೀ ಮಳೆಯ ನಡುವೆ ಪವರ್ ಮ್ಯಾನ್ ಕೆಲಸಗಳು.ಮನೆ ಮನೆಗೆ ವಿದ್ಯುತ್ ಸಂಪರ್ಕ ಗ್ರಾಮೀಣ ಭಾಗದಲ್ಲಿ ಸಾಹಸದ ಕೆಲಸ. #ಮಳೆ #rain #powerman @MESCOM_Official @mescomhelpline @karkalasunil @NammaBESCOM @HubliHescom pic.twitter.com/RTlDh9u9iY
— theruralmirror (@ruralmirror) July 8, 2022
Advertisement
ಚೆಂಬು ಪ್ರದೇಶದಲ್ಲಿನ ಪವರ್ ಮ್ಯಾನ್ ಬಸವರಾಜ್ ಅವರ ಕೆಲಸವನ್ನು ಚೆಂಬು ಪ್ರದೇಶದ ಆನಂದ ಅವರು ವಿಡಿಯೋ ಮಾಡಿ ಕಳುಹಿಸಿದ್ದಾರೆ.