ಮಳೆ ಮಳೆ ಮಳೆ ಎಂಬ ಮಾನವ ಸಹಜ ತುಡಿತ, ಚಡಪಡಿಕೆಗಳ ಮಧ್ಯೆ ಈಗಿನ ಕೆಲವು ವರ್ಷಗಳಲ್ಲಿ ಮಳೆ ಪ್ರಮಾಣ ಹೇಗಿತ್ತೂ ಎನ್ನುವುದರ ಹಿನ್ನೋಟ. ಪ್ರಕೃತಿಯ ಓಘವಿದೆಯಲ್ಲಾ…ಆಹಾ…ನೋಡಿ ಅನುಭವಿಸುವುದಕ್ಕೆ ಖುಷಿಯೋ ಖುಷಿ. ಒಮ್ಮೆ ಶಾಂತ,ಒಮ್ಮೆ ರೌದ್ರ,ಮತ್ತೊಮ್ಮೆ ಸರಳ,ಮಗದೊಮ್ಮೆ ಗಂಭೀರ .ಬಿಸಿಲು,ಮಳೆ ,ಮುಗಿಲು, ಚಳಿ, ಗಾಳಿ, ಮಂಜು.. .ಆಹಾ…ಕ್ಷಣ ಕ್ಷಣಕ್ಕೂ ಹೊಸಹೊಸ ರೂಪ ಧರಿಸಿ ಧೀಂಗಣವಿಡುವ ಅದ್ಭುತ ಶಕ್ತಿಯೇ ನಿನಗಾರು ಸಾಟಿ. ಶರಣು ಶರಣು.
ಮಳೆ ಸುರಿದ ಪ್ರಮಾಣದೆಡೆ ಹೀಗೊಂದು ಹಿನ್ನೋಟ….
2023 ರ ಈ ವರ್ಷ ಇಂದು, 20ರ ತನಕ ಒಟ್ಟು ಸುರಿದ ಮಳೆ 57 ದಿನಗಳಲ್ಲಿ1783 ಮಿಮಿ.
ಜುಲೈ ತಿಂಗಳಲ್ಲಿ ಮಾತ್ರ ಇಂದಿನ ತನಕ 926 ಮಿಮಿ.
2022 ರಲ್ಲಿ ಜುಲೈ 20 ರ ತನಕ ಒಟ್ಟು 78 ದಿನಗಳಲ್ಲಿ ಸುರಿದ ಮಳೆ 3171 ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 1648 ಮಿಮೀ.
ವಾರ್ಷಿಕವಾಗಿ ಒಟ್ಟು ಮಳೆ…. 168 ದಿನಗಳಲ್ಲಿ ಸುರಿದ ಮಳೆ 5486 ಮಿಮೀ.
2021 ರಲ್ಲಿ ಜುಲೈ 20 ರ ತನಕ ಒಟ್ಟು 87 ದಿನಗಳಲ್ಲಿ ಸುರಿದ ಮಳೆ 2357ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 728ಮಿಮೀ.
ವಾರ್ಷಿಕವಾಗಿ 187 ದಿನಗಳಲ್ಲಿ ಸುರಿದ ಒಟ್ಟು ಮಳೆ 5431 ಮಿಮೀ.
2020 ರಲ್ಲಿ ಜುಲೈ 20 ರ ತನಕ ಒಟ್ಟು72 ದಿನಗಳಲ್ಲಿ ಸುರಿದ ಮಳೆ 1747ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 802 ಮಿಮೀ .
ವಾರ್ಷಿಕವಾಗಿ 160 ದಿನಗಳಲ್ಲಿ ಸುರಿದ ಒಟ್ಟು ಮಳೆ 4545 ಮಿಮೀ.
ಅಂದರೆ ಕಳೆದ ವರ್ಷ ಮಳೆ ಪ್ರಮಾಣ ವಾಡಿಕೆಗಿಂತ ತುಂಬಾ ಹೆಚ್ಚಿತ್ತು. ಅಷ್ಟೇ…
ಈ ವರ್ಷ ಮುಂದಕ್ಕೆ ಪ್ರಕೃತಿಯ ನಿಗೂಢ ನಡೆ ಹೇಗಿದೆಯೋ…ನೋಡೋಣ….
ಹಿತಮಿತವಾಗಿ ಸುರಿದು ಸಮೃದ್ದಿ ತರಲೆಂದು ಶಿರಬಾಗಿ ಪ್ರಾರ್ಥಿಸೋಣವಲ್ಲವೇ…
ಕಾಲೇ ವರ್ಷತು ಪರ್ಜನ್ಯಃ
ಪೃಥ್ವಿ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತಃ
ಸಜ್ಜನಾ ಸಂತು ನಿರ್ಭಯಾಃ.