ಕರಾವಳಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ಭಾರೀ ಗಾಳಿ ಹಾಗೂ ಮಳೆಯಾಗುತ್ತಿದೆ. ಬೆಳಗ್ಗಿನಿಂದಲೇ ಗಾಳಿ ಜೋರಾಗಿ ಬೀಸುತ್ತಿದೆ. ಜೊತೆಗೆ ಮಳೆಯೂ ಸುರಿಯುತ್ತಿದೆ. ಹೀಗಾಗಿ ಗ್ರಾಮೀಣ ಭಾಗ ಸೇರಿದಂತೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಹಾನಿಯಾಗಿದೆ. ವಿದ್ಯುತ್ ಸಂಪರ್ಕಕ್ಕೂ ಕಷ್ಟವಾಗಿದೆ.
Heavy wind and rain at rural area of costal #rain #Karnatakarains #ಮಳೆ #ruralmirror
Advertisementಕರಾವಳಿ ಪ್ರದೇಶದ ಗ್ರಾಮೀಣ ಭಾಗದಲ್ಲಿ ಭಾರಿ ಗಾಳಿ ಹಾಗೂ ಮಳೆ. pic.twitter.com/1pzT6UshxC
— theruralmirror (@ruralmirror) July 14, 2022
Advertisement
ಉಪ್ಪಿನಂಗಡಿ ಬಳಿ ಭಾರೀ ಗಾಳಿಯ ಕಾರಣದಿಂದ ಕಟ್ಟವೊಂದರ ಶೀಟ್ ಹಾರಿದೆ. ಪುತ್ತೂರಿನಲ್ಲಿ ಬನ್ನೂರು ಶಾಲೆಯ ಬಳಿ ಕರ್ಮಲದಲ್ಲಿ ರಸ್ತೆಗೆ ಮರ ಬಿದ್ದಿದೆ. ಪೆರ್ನೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದಿದೆ.ಶಿರಾಡಿಯ ಅಡ್ಡಹೊಳೆ ಬಳಿಯೂ ಹೆದ್ದಾರಿಗೆ ಮರ ಉರುಳಿ ಬಿದ್ದಿದೆ. ಗ್ರಾಮೀಣ ಭಾಗದ ರಸ್ತೆಗಳಲ್ಲೂ ಮರ ಉರುಳಿ ವಾಹನ ಓಡಾಟಕ್ಕೆ ಕಷ್ಟವಾಗಿತ್ತು. ಮಳೆ ಹಾಗೂ ಗಾಳಿ ನಿರಂತರವಾಗಿದೆ.