ಸೋಮವಾರ ರಾತ್ರಿಯಿಂದ ಪಶ್ಚಿಮ ಘಟ್ಟದ ಪ್ರದೇಶಗಳಾದ ಕಲ್ಮಕಾರು, ಕೊಲ್ಲಮೊಗ್ರ, ಸಂಪಾಜೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಕಲ್ಮಕಾರು, ಕಲ್ಲುಗುಂಡಿ ಪ್ರದೇಶಗಳು ದ್ವೀಪವಾಗಿದೆ. ಅನೇಕ ಜನರು ಅತಂತ್ರವಾಗಿದ್ದಾರೆ. ಸಂಪರ್ಕಗಳು ಕಡಿತಗೊಂಡಿದೆ. ಕಲ್ಲಾಜೆಯಲ್ಲಿ ಮನೆ ಕುಸಿತವಾಗಿದೆ. ಗೀತಾ ಎಂಬವರ ಮನೆ ಕುಸಿದಿದೆ.
ಕಲ್ಮಕಾರು ಪ್ರದೇಶದಲ್ಲಿ ತಡರಾತ್ರಿ ಭಾರೀ ಸದ್ದಿನೊಂದಿಗೆ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅದಾದ ಬಳಿಕ ಪ್ರವಾಹದ ಮಾದರಿಯಲ್ಲಿ ನೀರು ಹರಿದಿದೆ. ಕಲ್ಮಕಾರು ಪೇಟೆಯ ಸಮೀಪದವರೆಗೂ ಹೊಳೆಯ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಿನ್ನೆಯಿಂದ ಕಲ್ಮಕಾರು ಪ್ರದೇಶ ಸಂಪರ್ಕ ಕಡಿತಗೊಂಡಿದೆ ಭಾರೀ ಮಳೆಯಾಗಿದೆ.ಕಲ್ಮಕಾರು ದ್ವೀಪವಾದಂತಾಗಿದೆ. ಸಂಪರ್ಕ ಕಡಿತಗೊಂಡಿದೆ ಎಂದು ಗಣೇಶ್ ಭಟ್ ಇಡ್ಯಡ್ಕ ತಿಳಿಸಿದ್ದಾರೆ.
ತಡರಾತ್ರಿಯೂ ಭಾರೀ ಮಳೆ ಸುರಿಯುತ್ತಿತ್ತು. ಎಲ್ಲಾ ಹೊಳೆ, ನದಿಗಳೂ ತುಂಬಿ ಹರಿದಿದೆ. ನದಿಯ ನೀರಿನ ಮಟ್ಟ ಏರಿದ ಕಾರಣ ಸ್ಥಳೀಯಾದ ಸಣ್ಣ ತೋಡುಗಳಲ್ಲಿಯೂ ನೀರು ನಿಂತಿದೆ ಎಂದು ಉದಯ ಶಿವಾಲ ತಿಳಿಸಿದರು.
ಸಂಪಾಜೆ ಪರಿಸರದಲ್ಲೂ ಭಾರೀ ಸದ್ದಿನೊಂದಿಗೆ ಮಳೆ ಆರಂಭವಾಗಿ, ಭೀಕರ ಮಳೆಯಾಗಿದೆ. ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು ತಡರಾತ್ರಿ ಕಲ್ಲುಗುಂಡಿ ಪ್ರದೇಶಕ್ಕೆ ನೀರು ನುಗ್ಗಿದೆ. ಇಡೀ ಕಲ್ಲುಗುಂಡಿ ಪೇಟೆ ಜಲಾವೃತವಾಗಿದೆ.ಜನರನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವ ಕೆಲಸ ನಡೆದಿದೆ.
ಸುಳ್ಯ ತಾಲೂಕಿನ ಇತಿಹಾಸದಲ್ಲಿ ಇದುವರೆಗೆ ಇಂತಹ ಭೀಕರ ಮಳೆ ದಾಖಲು ಆಗಿರಲಿಲ್ಲ. ಸುಮಾರು 75 ವರ್ಷಗಳಲ್ಲಿ ಸುಳ್ಯ-ಸುಬ್ರಹ್ಮಣ್ಯ ರಸ್ತೆಯ ಕಲ್ಲಾಜೆ ಸೇತುವೆ ಮುಳುಗಡೆಯಾಗಿರಲಿಲ್ಲ. ಸೋಮವಾರ ರಾತ್ರಿ ಸೇತುವೆ ಮುಳುಗಡೆಯಾಗಿದೆ. ಸುಮಾರು 30 ವರ್ಷಗಳ ಮಳೆ ಮಾಹಿತಿ ಪ್ರಕಾರ ಇದುವರೆಗೂ ಇಂತಹ ಮಳೆ ಬಂದಿರಲಿಲ್ಲ ಎಂದು ಕೊಲ್ಲಮೊಗ್ರದ ಕೇಶವ ಕಟ್ಟ ಹೇಳುತ್ತಾರೆ. ಕೊಲ್ಲಮೊಗ್ರದಲ್ಲಿ 302 ಮಿಮೀ ಮಳೆಯಾದರೆ ಕಲ್ಲಾಜೆಯಲ್ಲಿ 400 ಮಿಮೀಗಿಂತ ಅಧಿಕ ಮಳೆಯಾಗಿದೆ.
ಭಾರೀ ಮಳೆಗೆ ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ ಮನೆ ಕುಸಿತ|
House collapsed in Kallaje of Sulya taluk due to heavy rain#HeavyRain #rain #ruralmirror #ಮಳೆ pic.twitter.com/R7NfFRFz2H— theruralmirror (@ruralmirror) August 2, 2022
Advertisement