ಕಳೆದ ಮೂರು ದಿನಗಳಿಂದ ಕೊಲ್ಲಮೊಗ್ರ, ಕಲ್ಮಕಾರು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಲ್ಲಮೊಗ್ರ ಗೋಳ್ಯಾಡಿಯಲ್ಲಿ ಬರೆ ಕುಸಿದು ಮನೆಗೆ ಹಾನಿಯಾಗಿದೆ. ಗೋಳ್ಯಾಡಿ ಕುಶಾಲಪ್ಪ ಎಂಬವರ ಮನೆ ಮೇಲೆ ಬರೆ ಕುಸಿದಿದೆ. ಯಾವುದೇ ಅಪಾಯವಾಗಿಲ್ಲ. ಮನೆಗೆ ಹಾನಿಯಾಗಿದೆ. ಮನೆಯವರನ್ನು ಸ್ಥಳೀಯರ ಯುವಕರ ತಂಡ ಬೇರೆಡೆಗೆ ಸ್ಥಳಾಂತರ ಮಾಡಿದೆ. ಕಳೆದ ಮೂರು ದಿನಗಳಿಂದ ಕೊಲ್ಲಮೊಗ್ರ, ಕಲ್ಮಕಾರಿನಲ್ಲಿ ಯುವಕರ ತಂಡ ನಿರಂತರವಾಗಿ ನೆರವಾಗುತ್ತಿದೆ.
ನಿರಂತರ ಮಳೆಯ ನಡುವೆಯೂ ತಡರಾತ್ರಿವರೆಗೂ ಯುವಕ ತಂಡ ಕೊಲ್ಲಮೊಗ್ರ ಪ್ರದೇಶದಲ್ಲಿ ನಿರಂತರ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಗೆ ನೆರವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಹೇಳಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel