ಭಾರೀ ಮಳೆ | ಕೊಲ್ಲಮೊಗ್ರದಲ್ಲಿ ಬರೆ ಕುಸಿದು ಮನೆಗೆ ಹಾನಿ | ಅಪಾಯದಿಂದ ಪಾರು | ಯುವಕರ ತಂಡದಿಂದ ರಕ್ಷಣೆ |

ಕಳೆದ ಮೂರು ದಿನಗಳಿಂದ ಕೊಲ್ಲಮೊಗ್ರ, ಕಲ್ಮಕಾರು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಲ್ಲಮೊಗ್ರ ಗೋಳ್ಯಾಡಿಯಲ್ಲಿ ಬರೆ ಕುಸಿದು ಮನೆಗೆ ಹಾನಿಯಾಗಿದೆ.  ಗೋಳ್ಯಾಡಿ ಕುಶಾಲಪ್ಪ ಎಂಬವರ ಮನೆ ಮೇಲೆ ಬರೆ ಕುಸಿದಿದೆ. ಯಾವುದೇ ಅಪಾಯವಾಗಿಲ್ಲ. ಮನೆಗೆ ಹಾನಿಯಾಗಿದೆ. ಮನೆಯವರನ್ನು ಸ್ಥಳೀಯರ ಯುವಕರ ತಂಡ ಬೇರೆಡೆಗೆ ಸ್ಥಳಾಂತರ ಮಾಡಿದೆ. ಕಳೆದ ಮೂರು ದಿನಗಳಿಂದ ಕೊಲ್ಲಮೊಗ್ರ, ಕಲ್ಮಕಾರಿನಲ್ಲಿ ಯುವಕರ ತಂಡ ನಿರಂತರವಾಗಿ ನೆರವಾಗುತ್ತಿದೆ. 

Advertisement

ನಿರಂತರ ಮಳೆಯ ನಡುವೆಯೂ ತಡರಾತ್ರಿವರೆಗೂ ಯುವಕ ತಂಡ ಕೊಲ್ಲಮೊಗ್ರ ಪ್ರದೇಶದಲ್ಲಿ ನಿರಂತರ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಗೆ ನೆರವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಭಾರೀ ಮಳೆ | ಕೊಲ್ಲಮೊಗ್ರದಲ್ಲಿ ಬರೆ ಕುಸಿದು ಮನೆಗೆ ಹಾನಿ | ಅಪಾಯದಿಂದ ಪಾರು | ಯುವಕರ ತಂಡದಿಂದ ರಕ್ಷಣೆ |"

Leave a comment

Your email address will not be published.


*