ಮಳೆಯಬ್ಬರ | ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ | ಗುತ್ತಿಗಾರಿನಲ್ಲಿ ಗಾಳಿಮಳೆ | ಮಡಪ್ಪಾಡಿಯಲ್ಲಿ 60+ ಮಿಮೀ ಮಳೆ |

March 23, 2022
6:55 PM

ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಯಿತು. ಗುತ್ತಿಗಾರಿನಲ್ಲಿ ಗಾಳಿ ಸಹಿತ ಉತ್ತಮ ಮಳೆಯಾದರೆ ಮಡಪ್ಪಾಡಿಯಲ್ಲಿ  ಒಂದು ಗಂಟೆಯಲ್ಲಿ  65 ಮಿಮೀ ಹಾಗೂ ಗುತ್ತಿಗಾರಿನಲ್ಲಿ 45 ಮಿಮೀ ಮಳೆಯಾಯಿತು. 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಮಾರು ಒಂದು ಗಂಟೆಯ ಕಾಲ ಸುರಿದ ಮಳೆ ಭೂಮಿಯನ್ನು ತಂಪಾಗಿಸಿತು. ಕಳೆದ ವಾರವೂ ಉತ್ತಮ ಮಳೆಯಾಗಿದ್ದರೆ ಇದೀಗ ಮತ್ತೆ ಮಳೆಯಾಗುವ ಮೂಲಕ ಭೂಮಿ ತಂಪಾಗಿಸಿತು. ಗುಡುಗು, ಗಾಳಿ, ಮಿಂಚು, ಸಹಿತ, ಮಳೆಯಾಗಿದೆ. ಗುಡುಗು, ಗಾಳಿ  ಕಾರಣ ಸುಬ್ರಹ್ಮಣ್ಯ ಪ್ರದೇಶದಲ್ಲಿ ವಿದ್ಯುತ್‌ ಕಡಿತವಾಗಿದೆ.

ಉಳಿದಂತೆ ಗುತ್ತಿಗಾರಿನಲ್ಲಿ ಗುಡುಗು, ಭಾರೀ ಗಾಳಿ ಸಹಿತ ಮಳೆಯಾಗಿದೆ. ಸಂಜೆ ಧಾರಾಕಾರ ಮಳೆ ಹಾಗೂ ಭಾರೀ ಗಾಳಿಯಾಗಿದೆ. ಹಲವು ಕಡೆಗಳಲ್ಲಿ ಅಡಿಕೆ ಮರ ಉರುಳಿದೆ. ಒಂದು ಗಂಟೆಯಲ್ಲಿ 45 ಮಿಮೀ ಮಳೆಯಾಗಿದೆ. ನಂತರವೂ ಮಳೆಯಾಗುತ್ತಿದೆ.ʼಮಡಪ್ಪಾಡಿಯಲ್ಲಿ ಧಾರಾಕಾರ ಮಳೆಯಾಗಿದ್ದು ಒಂದು ಗಂಟೆಯಲ್ಲಿ 65 ಮಿಮೀಗಿಂತಲೂ ಹೆಚ್ಚು ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಂಜ, ಕಡಬ, ಮರ್ಕಂಜ, ಉಬರಡ್ಕ, ಬಳ್ಪ, ಕೇನ್ಯ, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರ, ಬಾಳುಗೋಡು, ನೆಲ್ಯಾಡಿ, ಬೆಳ್ತಂಗಡಿಯ ಕೆಲವು ಪ್ರದೇಶದಲ್ಲೂ ಮಳೆಯಾಗಿದೆ.

ಮಾಹಿತಿ : ಅನನ್ಯ , ಸುಬ್ರಹ್ಮಣ್ಯ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror