ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಯಿತು. ಗುತ್ತಿಗಾರಿನಲ್ಲಿ ಗಾಳಿ ಸಹಿತ ಉತ್ತಮ ಮಳೆಯಾದರೆ ಮಡಪ್ಪಾಡಿಯಲ್ಲಿ ಒಂದು ಗಂಟೆಯಲ್ಲಿ 65 ಮಿಮೀ ಹಾಗೂ ಗುತ್ತಿಗಾರಿನಲ್ಲಿ 45 ಮಿಮೀ ಮಳೆಯಾಯಿತು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಮಾರು ಒಂದು ಗಂಟೆಯ ಕಾಲ ಸುರಿದ ಮಳೆ ಭೂಮಿಯನ್ನು ತಂಪಾಗಿಸಿತು. ಕಳೆದ ವಾರವೂ ಉತ್ತಮ ಮಳೆಯಾಗಿದ್ದರೆ ಇದೀಗ ಮತ್ತೆ ಮಳೆಯಾಗುವ ಮೂಲಕ ಭೂಮಿ ತಂಪಾಗಿಸಿತು. ಗುಡುಗು, ಗಾಳಿ, ಮಿಂಚು, ಸಹಿತ, ಮಳೆಯಾಗಿದೆ. ಗುಡುಗು, ಗಾಳಿ ಕಾರಣ ಸುಬ್ರಹ್ಮಣ್ಯ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಿದೆ.
ಉಳಿದಂತೆ ಗುತ್ತಿಗಾರಿನಲ್ಲಿ ಗುಡುಗು, ಭಾರೀ ಗಾಳಿ ಸಹಿತ ಮಳೆಯಾಗಿದೆ. ಸಂಜೆ ಧಾರಾಕಾರ ಮಳೆ ಹಾಗೂ ಭಾರೀ ಗಾಳಿಯಾಗಿದೆ. ಹಲವು ಕಡೆಗಳಲ್ಲಿ ಅಡಿಕೆ ಮರ ಉರುಳಿದೆ. ಒಂದು ಗಂಟೆಯಲ್ಲಿ 45 ಮಿಮೀ ಮಳೆಯಾಗಿದೆ. ನಂತರವೂ ಮಳೆಯಾಗುತ್ತಿದೆ.ʼಮಡಪ್ಪಾಡಿಯಲ್ಲಿ ಧಾರಾಕಾರ ಮಳೆಯಾಗಿದ್ದು ಒಂದು ಗಂಟೆಯಲ್ಲಿ 65 ಮಿಮೀಗಿಂತಲೂ ಹೆಚ್ಚು ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಂಜ, ಕಡಬ, ಮರ್ಕಂಜ, ಉಬರಡ್ಕ, ಬಳ್ಪ, ಕೇನ್ಯ, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರ, ಬಾಳುಗೋಡು, ನೆಲ್ಯಾಡಿ, ಬೆಳ್ತಂಗಡಿಯ ಕೆಲವು ಪ್ರದೇಶದಲ್ಲೂ ಮಳೆಯಾಗಿದೆ.
ಮಾಹಿತಿ : ಅನನ್ಯ , ಸುಬ್ರಹ್ಮಣ್ಯ
ದೆಹಲಿಯಲ್ಲಿ ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…
ಮುಂದಿನ 5 ದಿನಗಳ ಕಾಲ ಕೇರಳದಲ್ಲಿಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ…
ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…