ಭರ್ಜರಿ ಗಾಳಿ ಮಳೆಗೆ ಕೃಷಿಗೆ ಹಾನಿ | ಕಲ್ಲಾಜೆಯಲ್ಲಿ ದಾಖಲೆಯ 95 ಮಿಮೀ ಮಳೆ |

April 14, 2022
10:08 AM

ಬುಧವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕು ಸೇರಿದಂತೆ ವಿವಿದೆಡೆಯ ಕೃಷಿಕರಿಗೆ ಅಪಾರ ನಷ್ಟವಾಗಿದೆ. ಗಾಳಿ ಮಳೆಗೆ ವಿವಿದೆಡೆ ಮನೆಗೆ, ಅಂಗಡಿಗಳಿಗೆ ಹಾನಿಯಾಗಿದೆ. ಪುತ್ತೂರು ಜಾತ್ರಾ ಉತ್ಸವದ ಪ್ರಯುಕ್ತ ಹಾಕಿದ್ದ ಅಂಗಡಿಗಳಿಗೂ ಮಳೆಯಿಂದ ಹಾನಿಯಾಗಿದೆ.  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸುಳ್ಯ ತಾಲೂಕಿನ ವಿವಿದೆಡೆ ಅಡಿಕೆ ಮರಗಳು ಉರುಳಿದೆ. ಕಳೆದ 3 ದಿನದ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಅಡಿಕೆ ಮರಗಳು ನಾಶವಾಗಿದೆ. ಬುಧವಾರ ಕಲ್ಲಾಜೆಯಲ್ಲಿ 95 ಮಿಮೀ ದಾಖಲೆಯ ಮಳೆಯಾಗಿದೆ. 1994 ರಲ್ಲಿ ಎಪ್ರಿಲ್‌ ತಿಂಗಳಲ್ಲಿ ದಾಖಲೆಯ ಮಳೆಯಾಗಿತ್ತು ಎಂದು ಮಳೆ ದಾಖಲೆ ಸಂಗ್ರಹಗಾರ ಪಿ ಜಿ ಎಸ್‌ ಎನ್‌ ಪ್ರಸಾದ್‌  ಮಾಹಿತಿ ನೀಡಿದ್ದಾರೆ.

Advertisement

ಕಳೆದ ಒಂದು ವಾರದಿಂದ ಸುಳ್ಯ ತಾಲೂಕಿನಲ್ಲಿ ಮಳೆಯ ಅಬ್ಬರ ಇದೆ. ಅದರಲ್ಲೂ ಗಾಳಿ ಮಳೆಗೆ ಅಪಾರ ಪ್ರಮಾಣದ ಕೃಷಿ ಹಾನಿಯಾಗುತ್ತಿದೆ. ಬುಧವಾರ ದ ಕ ಜಿಲ್ಲೆಯ ವಿವಿದೆಡೆ ಗಾಳಿಯ ಅಬ್ಬರವೂ ಕಂಡುಬಂದಿತ್ತು. ಸುಳ್ಯ ಸೇರಿದಂತೆ ಪುತ್ತೂರು, ಬೆಳ್ತಂಗಡಿಯ ವಿವಿಧ ಕೃಷಿಕರ ತೋಟದಲ್ಲಿ ಅಡಿಕೆ ಮರಗಳು ಧರೆಗೆ ಉರುಳಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ಅವರ ತೋಟದಲ್ಲಿ ಕಳೆದ ಮೂರು ದಿನಗಳ ಗಾಳಿಗೆ ಒಟ್ಟು ಸುಮಾರು 200 ಕ್ಕೂ ಅಧಿಕ ಅಡಿಕೆ ಮರ ಧರೆಗೆ ಉರುಳಿದೆ. ಆಸುಪಾಸಿನ ಕೃಷಿಕರ ತೋಟದಲ್ಲೂ ಕೃಷಿ ನಾಶವಾಗಿದೆ. ಪಂಜ, ಕರಿಕಳದಲ್ಲೂ ಕೃಷಿ ನಾಶವಾಗಿದೆ. ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿಯ ಅಬ್ಬರದಿಂದ ಕೃಷಿಕರು ನಷ್ಟ ಅನುಭವಿಸಿದರು.

Advertisement
ಎಲ್ಲೆಲ್ಲಿ ಎಷ್ಟು ಮಳೆಯಾಯಿತು...?

ಕಲ್ಲಾಜೆ 95 ಮಿಮೀ, ಕಮಿಲ 51 ಮಿಮೀ, ಮಡಪ್ಪಾಡಿ 47 ಮಿಮೀ,ಬಂಗಾರಡ್ಕ ಆರ್ಯಾಪು 47 ಮಿಮೀ, ಸುಬ್ರಹ್ಮಣ್ಯ 46 ಮಿಮೀ, ಬಳ್ಪ 43 ಮಿಮೀ, ದೊಡ್ಡತೋಟ 44 ಮಿಮೀ, ಕೇನ್ಯ 41ಮಿಮೀ, ನೆಲ್ಯಾಡಿ 39, ಕಂದ್ರಪ್ಪಾಡಿ 36 ಮಿಮೀ,  ಕೈಲಾರು 36 ಮಿಮೀ,  ಮಂಜಿ 35 ಮಿಮೀ, ಬೆಳ್ತಂಗಡಿ 35 ಮಿಮೀ, ಮುಂಡೂರು 35 ಮಿಮೀ, ನೆಕ್ರಕಜೆ 35 ಮಿಮೀ, ಬಲ್ನಾಡು 34 ಮಿಮೀ,  ಮೆಟ್ಟಿನಡ್ಕ 34 ಮಿಮೀ, ಕೊಳ್ತಿಗೆ 34 ಮಿಮೀ,  ಕೆಲಿಂಜ 30 ಮಿಮೀ, ಕೈರಂಗಳ 25 ಮಿಮೀ, ಉರುವಾಲು 28 ಮಿಮೀ, ಮರ್ಧಾಳ 26 ಮಿಮೀ, ಉಪ್ಪಿನಂಗಡಿ 26 ಮಿಮೀ, ಹರಿಹರ 25 ಮಿಮೀ,  ಕೋಡಿಂಬಾಳ 24 ಮಿಮೀ, ಪಾಂಡೇಶ್ವರ 22 ಮಿಮೀ, ಕೊಲ್ಲಮೊಗ್ರ 22 ಮಿಮೀ, ಚೊಕ್ಕಾಡಿ 20 ಮಿಮೀ, ಮುರುಳ್ಯ 19 ಮಿಮೀ,  ಎಣ್ಮೂರು 18 ಮಿಮೀ , ಬೆಳ್ಳಾರೆ ಕಾವಿನಮೂಲೆ 18 ಮಿಮೀ, ಕಡಬ 18 ಮಿಮೀ, ಕರಿಕಳ 18 ಮಿಮೀ, , ಅಯ್ಯನಕಟ್ಟೆ 16 ಮಿಮೀ, ಬಾಳಿಲ 16 ಮಿಮೀ, ಸುಳ್ಯ 16 ಮಿಮೀ ಮಳೆಯಾಗಿದೆ. ಕಾಸರಗೋಡಿನಲ್ಲಿ ದಾಖಲೆಯ ಮಳೆಯಾಗಿದೆ. ರಾತ್ರಿ ಇಡೀ ವರ್ಷಧಾರೆಯಾಗಿದ್ದು ಕಳೆದ 24 ಗಂಟೆಯಲ್ಲಿ 138 ಮಿಮೀ ಮಳೆಯಾಗಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..
July 8, 2025
10:18 AM
by: The Rural Mirror ಸುದ್ದಿಜಾಲ
ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ
July 8, 2025
7:11 AM
by: The Rural Mirror ಸುದ್ದಿಜಾಲ
ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!
July 8, 2025
7:04 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್
July 7, 2025
11:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group