ಮಳೆ ಹಾನಿ ಬೆಳೆನಷ್ಟ ಪರಿಹಾರ ಹೆಚ್ಚಿಸುವ ಕುರಿತಂತೆ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯಾದ್ಯಂತ ಇರುವ 38,000 ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸರಬರಾಜು ಮಾಡಲು ಯೋಜನೆಯ ರೂಪಿಸಿ ಅನುದಾನ ನಿಗದಿ ಮಾಡಬೇಕು. ಕಬ್ಬಿನ ಉತ್ಪನ್ನ ವೆಚ್ಚ ಏರಿಕೆಯಾಗಿದ್ದು ಎಫ್‌ಆರ್‌ಪಿ ದರ ಸಮಂಜಸವಾಗಿಲ್ಲ. ಕಬ್ಬಿನ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದೆ. ರಾಜ್ಯಾದ್ಯಂತ ಅತಿವೃಷ್ಟಿ ಮಳೆ ಹಾನಿ ಪರಿಹಾರವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಮಳೆ ಆಶ್ರಯಿತ ಭೂಮಿಗೆ ಎಕರೆಗೆ 25 ಸಾವಿರ ನೀರಾವರಿಗೆ 40 ಸಾವಿರ ವಿತರಿಸುವಂತೆ ಮನವಿ ಮಾಡಿದ್ದಾರೆ. ಕೆಐಡಿಬಿ ರೈತರ ಜಮೀನು ವಶಪಡಿಸಿಕೊಂಡು 25 ವರ್ಷವಾದರೂ ಯಾವುದೇ ಉದ್ದೇಶಕ್ಕೆ ಬಳಸದೆ ಖಾಲಿ ಬಿಟ್ಟಿರುವ ಜಮೀನುಗಳನ್ನು ರೈತರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.




